ಪ್ರಧಾನಿ ಮೋದಿ ಇಂದಿನಿಂದ ಎರಡು ದಿನಗಳ ಜಪಾನ ಪ್ರವಾಸದಲ್ಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಜಪಾನ್‌ಗೆ ತೆರಳಿದ್ದು, ಜಪಾನ್‌ ಭೇಟಿಯು ಎರಡು ದೇಶಗಳ ನಡುವೆ ನಾಗರಿಕ ಬಾಂಧವ್ಯ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನ ಬಲಪಡಿಸಲು ಒಂದು ಅವಕಾಶ ಎಂದು ಹೊರಡುವ ಮುನ್ನ ತಿಳಿಸಿದ್ದಾರೆ.

ಭಾರತ-ಜಪಾನ್ ಪಾಲುದಾರಿಕೆಯನ್ನು ಮುನ್ನಡೆಸಲು ಜಪಾನ್‌ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಸಂಜೆ ಚರ್ಚೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ಇನ್ನು ಈ ಬಗ್ಗೆ ಪ್ರಧಾನಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ವಿವಿಧ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಪಾನ್ ಮತ್ತು ಚೀನಾದಲ್ಲಿ ಇರುತ್ತೇನೆ. ಜಪಾನ್‌ನಲ್ಲಿ, 15 ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ ಮತ್ತು ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಆಳಗೊಳಿಸುವುದು ಮತ್ತು ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಹೆಚ್ಚಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ನಾನು ಸೆಂಡೈಗೆ ಭೇಟಿ ನೀಡಲು ಸೆಂಡೈಗೆ ಪ್ರಯಾಣಿಸುತ್ತೇನೆ, ಹೀಗಾಗಿ ಉದಯೋನ್ಮುಖ ತಂತ್ರಜ್ಞಾನಗಳು, AI ಮತ್ತು ಅರೆವಾಹಕಗಳಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರದ ಭವಿಷ್ಯದ ಆಯಾಮವನ್ನು ಎತ್ತಿ ತೋರಿಸುತ್ತದೆ ಅಂತಾ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜಪಾನ್‌ನ ಟೋಕಿಯೊಗೆ ಬಂದಿಳಿದಿದ್ದಾರೆ. ಜಪಾನ್‌ನಲ್ಲಿರುವ ಭಾರತೀಯರು ಇಂಡಿಯನ್‌ ಫ್ಲಾಗ್‌ ಹಿಡಿದುಕೊಂಡು ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಿದ್ರು. ಬಳಿಕ ಮೋದಿ ಅವರನ್ನ ಮಾತನಾಡಿಸಿದ್ರು.

ಇಂದಿನಿಂದ 30 ರವರೆಗೆ ಜಪಾನ್‌ ಪ್ರವಾಸದಲ್ಲಿರಲಿದ್ದಾರೆ. ಶ್ರೀ ಮೋದಿ ಅವರು ತಮ್ಮ ಜಪಾನ್ ಪ್ರಧಾನಿ ಇಶಿಬಾ ಅವರೊಂದಿಗೆ ಶೃಂಗಸಭೆಯ ಮಾತುಕತೆ ನಡೆಸಲಿದ್ದಾರೆ.

ಇಷ್ಟೇ ಅಲ್ಲದೇ ಜಪಾನ್‌ನಿಂದ ಪ್ರಧಾನಿ ಮೋದಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಎರಡು ದಿನಗಳ ಭೇಟಿಗಾಗಿ ಚೀನಾಕ್ಕೆ ಪ್ರಯಾಣಿಸಲಿದ್ದಾರೆ.

Read Also : ಅಮಿತ್‌ ಶಾ ಮಂಡಿಸಿದ ಮಸೂದೆಗೆ ತೀವ್ರ ವಿರೋಧ, ಮಸೂದೆ ಹರಿದು.. ಶಾ ಕಡೆಗೆ ಎಸೆದು.. ಪ್ರತಿಪಕ್ಷಗಳ ಆಕ್ರೋಶ

Share.
Leave A Reply