IPL Suspended For One Week: ಭಾರತ ಮತ್ತು ಪಾಕಿಸ್ತಾನ (India Vs Pakistan) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಐಪಿಎಲ್(IPL) ಉಳಿದ 16 ಪಂದ್ಯಗಳನ್ನು ತಾತ್ಕಲಿಕವಾಗಿ ಒಂದು ವಾರದ ಮಟ್ಟಿಗೆ ಮುಂದಕ್ಕೆ ಹಾಕಿದೆ.

ಭಾರತವು ಪಾಕಿಸ್ತಾನ ಪ್ರಮುಖ ನಗರಗಳಾದ ಲಾಹೋರ್‌, ಬಲೂಚಿಸ್ತಾನ ಮತ್ತು ಕರಾಚಿ ನಗರಗಳ ಮೇಲೆ ಕ್ಷೀಪಣಿ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಲಾಹೋರ್‌ ಮಾರುಕಟ್ಟೆಯು ಛಿದ್ರಗೊಂಡಿದೆ. ಇದರಿಂದ ಪಾಕಿಸ್ತಾನ ಕೂಡಾ ಪ್ರತಿದಾಳಿ ಮಾಡಿತ್ತು.

ಈ ದಾಳಿಯನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ಪಾಕಿಸ್ತಾನ ಕ್ಷಿಪಣಿಗಳನ್ನು ಹೊಡೆದು ಉರುಳಿಸಿದೆ. ಇದರಿಂದ ಆಟಗಾರರು ಹಾಗೂ ಪ್ರೇಕ್ಷಕರ ಸುರಕ್ಷಿತಾ ಕ್ರಮವಾಗಿ ಐಪಿಎಲ್‌ ಉಳಿದ ಪಂದ್ಯಗಳನ್ನು ತಾತ್ಕಲಿಕವಾಗಿ ಮುಂದೂಡಲಾಗಿದೆ. ಮತ್ತು ಕೇಂದ್ರ ಸರ್ಕಾರ ಆದೇಶದ ನಂತರ ಮರು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಅಂತ ಬಿಸಿಸಿಐ ಮೂಲಗಳು ಹೇಳಿವೆ.

ಸದ್ಯ ಐಪಿಎಲ್‌ನ ಎಲ್ಲಾ ಪಂದ್ಯಗಳು ರದ್ದಾಗಿದ್ದು, ಮ್ಯಾಚ್‌ ಪ್ರಿಯರು ಕೊಂಚ ಬೇಸರದಲ್ಲಿದ್ದಾರೆ. ಅದೇನೆ ಇದ್ರೂ ಮ್ಯಾಚ್‌ ಮಿಸ್‌ ಮಾಡ್ಕೊಳ್ತೀರೋ ಜನ ಈಗ ಆಪರೇಷನ್‌ ಸಿಂದೂರ ಸಕ್ಸಸ್‌ನಿಂದ ನಿರಾಳರಾಗಿದ್ದಾರೆ. ಭಾರತೀಯ ಸೇನೆಗೆ ಎಲ್ಲೆಡೆ ಜೈಕಾರ ಮೊಳಗಿದೆ.

Also Read: Pak MP Calls Shehbaz Sharif A “Coward” : ʼಶೆಹಬಾಜ್ ಷರೀಫ್ ಮೋದಿ ಹೆಸರನ್ನೂ ಉಚ್ಚರಿಸಲಾರರು’: ಅವರ ಪ್ರಧಾನಿಯನ್ನೇ ‘ಹೇಡಿ’ ಎಂದ ಪಾಕ್‌ ಸಂಸದ

ಆಪರೇಷನ್ ಸಿಂಧೂರ್ ಎನ್ನುವ ಹೆಸರು ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದೆ. ಪಹಲ್ಗಾಮ್​ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ಕಣ್ಣೀರಿಟ್ಟ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದೆ.

Share.
Leave A Reply