ಬಳ್ಳಾರಿ: ಮಹಿಳೆಯೋರ್ವರು ಪ್ರಿಯಕರ ಕೈ ಕೊಟ್ಟಿದ್ದಕ್ಕೆ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬಳ್ಳಾರಿಯ (Ballari) ಹುಸೇನ್ ನಗರದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಮಹಿಳೆಯೊಬ್ಬಳು ವಿಡಿಯೋ ಮಾಡುತ್ತಲೇ ಆತ್ಮಹತ್ಯೆ (Live Suicide) ಮಾಡಿಕೊಂಡಿದ್ದಾರೆ. ಮುನ್ನಿ (23) ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಆತ್ಮಹತ್ಯೆಗೊಳಗಾದ ಮುನ್ನಿಗೆ ಕೂಡ ಮದುವೆಯಾಗಿತ್ತು. ಎರಡು ಮಕ್ಕಳನ್ನು ಕೂಡ ಹೊಂದಿದ್ದಳು. ಆದರೆ, ಕಳೆದ 6 ತಿಂಗಳಿಂದ ಪತಿಯಿಂದ ದೂರವಾಗಿದ್ದಳು ಎನ್ನಲಾಗಿದೆ.
ಪತಿಯಿಂದ ದೂರವಾದ ನಂತರ ಇತ್ತೀಚೆಗೆ ವಿವಾಹಿತ ಮೊಹಮ್ಮದ್ ಶೇಕ್ ಎಂಬಾತನೊಂದಿಗೆ ಪ್ರೀತಿ(Love)ಯಲ್ಲಿ ಬಿದ್ದಿದ್ದಳು ಎಂದು ತಿಳಿದು ಬಂದಿದೆ. ಮುನ್ನಿಗೆ ಶೇಖ್ ಸಂಬಂಧದಲ್ಲಿ ಅಣ್ಣ ಆಗಿದ್ದರೂ ಇಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಯ ನಂತರ ನನ್ನನ್ನು ಮದುವೆಯಾಗು ಎಂದು ಮುನ್ನಿ ಒತ್ತಾಯ ಮಾಡುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುನ್ನಿ ಹಾಗೂ ಶೇಕ್ ಮಧ್ಯೆ ಗಲಟೆ ನಡೆದಿದೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಲೈವ್ ಸೂಸೈಡ್ ವಿಡಿಯೋದಲ್ಲಿ ನನಗೆ ತೊಂದರೆ ನೀಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದು, ನಗರದ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
