coffee: ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಈಗ್ಲೆ ಜನರು ಮಳೆಗೆ ಬೇಸತ್ತಿದ್ದಾರೆ.. ಇನ್ನು ಮಂಗಳೂರಿನ ಉಳ್ಳಾಲದಲ್ಲಿ ನಿನ್ನೆ ಮಳೆ ಅವಾಂತರಕ್ಕೆ ಮನೆ ಮೇಲೆ ಗುಡ್ಡ ಕುಸಿದು ಸಾಕಷ್ಟು ಜನ ಸಾವನ್ನಪ್ಪಿದ್ದಾರೆ..
ಇಂದು ಕೊಡುಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕೆಲ ದಿನದಿಂದ ಸುರಿದ ಭಾರಿ ಮಳೆಗೆ ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದ coffee ಗಿಡಗಳು ಹಾನಿಯಾಗಿವೆ. ಕೂತಿ ಗ್ರಾಮದ ಡಿ ಕೆ ಪ್ರಕಾಶ್ ಎಂಬುವವರಿಗೆ ಸೇರಿದ ಜಾಗದಲ್ಲಿ ಕಳೆದ ರಾತ್ರಿ ಭೂ ಕುಸಿತ ಉಂಟಾಗಿದೆ.
Also Read: ಕನ್ನಡಿಗರ ಖಡಕ್ ವಾರ್ನ್.. Kamal ಥಗ್‌ಲೈಫ್ ಚಿತ್ರ ರಿಲೀಸ್ ಆಗಲ್ವಾ?
ಕೂತಿ-ಹೊಸೂರು -ಶನಿವಾರ ಸಂತೆಗೆ ಸಂಪರ್ಕ ಕಲ್ಪಿಸುವ ಬೆಟ್ಟದ ರಸ್ತೆಯಲ್ಲಿ ಭೂ ಕುಸಿತವಾಗಿದ್ದು, ಮಳೆ ಹೀಗೆ ಮುಂದುವರೆದರೆ ರಸ್ತೆಯು ಕುಸಿದು ಸಂಪರ್ಕ ಸ್ಥಗಿತವಾಗಲಿದೆ. ಇನ್ನು ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಕರಿಬಸವರಾಜು, ಪ್ರಭಾರ ಸಹಾಯ ತೋಟಗರಿಕ ಇಲಾಖೆ ಅಧಿಕಾರಿ ರಾಜು ಎಸ್.ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2018ರಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾದ ಪ್ರದೇಶದ ಸಮೀಪದಲ್ಲೇ ಈ ಭಾರಿ ಕುಸಿತ ಕಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
