ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ ಎಂದು ಕುಚೇಷ್ಟೆಯ ಹೇಳಿಕೆ ನೀಡಿ ಕನ್ನಡಿಗರ ಸ್ವಾಭಿಮಾನ ಕೆಣಕಿರುವ ನಟ Kamal ಹಾಸನ್‌ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಥಗ್‌ಲೈಫ್‌ ಸಿನಿಮಾ ಬಿಡುಗಡೆ ಮಾಡುವ ಚಿತ್ರಮಂದಿರಗಳಿಗೆ ಅವಕಾಶ ನೀಡಲ್ಲ ಎಂದು ಕರವೇ ಹೋರಾಟಗಾರರು ಸೇರಿದಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಮಲ್‌ ಹಾಸನ್‌ ಕ್ಷಮೆ ಕೇಳಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆಗಳು, ಆಕ್ರೋಶಗಳು ವ್ಯಕ್ತವಾಗುತ್ತಿವೆ. ತಮಿಳಿಗರನ್ನು ಓಲೈಸಲು ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಜತೆಗೆ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿ ಕನ್ನಡಿಗರನ್ನು ಮತ್ತಷ್ಟು ಕೆಣಕಿದ್ದಾರೆ. ಹೀಗಾಗಿ ಅವರ ಥಗ್‌ ಲೈಫ್‌ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇವೆ ಎಂಬ ಎಚ್ಚರಿಕೆ ಸಹ ಕೊಟ್ಟಿದ್ರು.

Also Read: Covid guidelines : ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳ : ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ನ್ಯೂ ಗೈಡ್‌ಲೈನ್ಸ್‌…!

ಇದರ ಬೆನ್ನಲ್ಲೇ ಕನ್ನಡಿಗರ ವಿರೋಧದ ನಡುವೆಯೂ ವಿಕ್ಟರಿ ಸಿನಿಮಾ ಚಿತ್ರಮಂದಿರದಲ್ಲಿ ಕಮಲ್‌ ನಟನೆಯ ಥಗ್‌ಲೈಫ್‌ ಸಿನಿಮಾ ಬಿಡುಗಡೆ ಮಾಡುವುದಾಗಿ ಈ ಚಿತ್ರ ಮಂದಿರ ಹೇಳಿತ್ತು. ಇದರ ವಿರುದ್ಧ ಸಿಡಿದ್ದೆದ್ದ ಕರವೇ ಕಮಲ್ ಚಿತ್ರ‌ ರಿಲೀಸ್‌ ಮಾಡಿದ್ರೆ ಚಿತ್ರಮಂದಿರಕ್ಕೆ ಬೆಂಕಿ ಹಾಕುವುದಾಗಿ ಎಚ್ಚರಿಕೆ ಸಹ ನೀಡಿತ್ತು.

ಇದಕ್ಕೆ ಬೆದರಿದ ವಿಕ್ಟರಿ ಸಿನಿಮಾ, ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಚಿತ್ರ ಬಿಡುಗಡೆ ಆದ್ರೆ ಮಾತ್ರ ನಮ್ಮ ಚಿತ್ರಮಂದಿರದಲ್ಲೂ ಬಿಡುಗಡೆ ಆಗುತ್ತೆ. ಆ ವಿವಾದ ಇನ್ನೂ ಬಗೆಹರಿದಿಲ್ಲ, ಹಾಗಾಗಿ ಬಿಡುಗಡೆಯ ಬಗ್ಗೆ ಇನ್ನೂ ಗೊಂದಲ ಇದೆ ಎಂಬ ರೀತಿ ಟ್ವೀಟ್‌ ಮಾಡಿದೆ. ಸಧ್ಯ ಕನ್ನಡಿಗರ ಒಗ್ಗಟ್ಟಿನ ಎಚ್ಚರಿಕೆಗೆ ಚಿತ್ರ ಮಂದಿರ ತಲೆ ಬಾಗಿಸಿದಂತಿದೆ.

Share.
Leave A Reply