ಭಾರತೀಯ ಸೇನೆಯ ಆಪರೇಶನ್ ಸಿಂಧೂರ (Operation Sindoor)ಕಾರ್ಯಾಚರಣೆಯ ಮಹಾನ್ ಯಶಸ್ಸನ್ನು ಆಚರಿಸಲು ಕರ್ನಾಟಕ ಸರ್ಕಾರ ಇಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ಜೈ ಹಿಂದ್ ಕಾರ್ಯಕ್ರಮ ಆಯೋಜಿಸಿತ್ತು. ಸಶಸ್ತ್ರ ಪಡೆಗಳ ಮಾಜಿ ಅಧಿಕಾರಿಗಳು, ಯೋಧರು, ಮುಖ್ಯಮಂತ್ರಿ Siddaramaiah, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲ ಮತ್ತು ಹಲವಾರು ಗಣ್ಯರು ಭಾಗಿಯಾಗಿದ್ದರು. ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಇತರ ಪ್ರಮುಖರಿಗೆ ಯೋಧರು ಧರಿಸುವ ಜಾಕೆಟ್ ತೊಟ್ಟು ಮಿಂಚಿದರು.




ಇನ್ನು ಇಡೀ ದೇಶಾದ್ಯಂತ ಕಾಂಗ್ರೆಸ್ ನಿಂದ ನಡೆಯುತ್ತಿರುವ ಜೈಹಿಂದ್ ಸಭಾ ಕಾರ್ಯಕ್ರಮ ನಡೆಯುತ್ತಿದೆ. ಸಶಸ್ತ್ರ ಪಡೆಗಳ ವೀರ ಯೋಧರಿಗೆ ನಮನ ಸಲ್ಲಿಸಲು ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಭಾರತೀಯ ಯೋಧರ ಪರಂಪರೆಯನ್ನು ಶ್ಲಾಘಿಸಿ, ನಿವೃತ್ತ ಯೋಧ ಸಮೂಹವನ್ನು ಸನ್ಮಾನಿಸಿ, ಹುತಾತ್ಮ ಯೋಧರ ಕುಟುಂಬದ ಸದಸ್ಯರನ್ನು ಸನ್ಮಾನ ಪುರಸ್ಕರಿಸಿ ಸಿಎಂ ಮಾತನಾಡಿದರು.
ಈ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ತ್ಯಾಗ ಮನೋಭಾವದಿಂದ ಯೋಧರು ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ರಕ್ಷಣೆ ಕೇವಲ ಯೋಧರ ಜವಾಬ್ದಾರಿಯಲ್ಲ. 140 ಕೋಟಿ ಭಾರತೀಯರ ಜವಾಬ್ದಾರಿ. ಶಿಷ್ಟ ರಕ್ಷಣೆ-ದುಷ್ಟರ ಸಂಹಾರದ ವಿಚಾರದಲ್ಲಿ ಭಾರತ ತನ್ನ ಇತಿಹಾಸದಲ್ಲೇ ಯಾವತ್ತೂ ರಾಜಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯರ ಬದ್ಧತೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
Also Read: Kamal Haasan : ನಟ ಕಮಲ್ ಹಾಸನ್ಗೆ ಕನ್ನಡದ ಇತಿಹಾಸ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ
ನಮ್ಮ ಸೈನಿಕರು ಪಹಲ್ಗಾಮ್ ಘಟನೆ ಆದ ಮೇಲೆ ಉಗ್ರರ ನೆಲೆಗಳನ್ನ ಪತ್ತೆ ಹಚ್ಚಿ ಧ್ವಂಸ ಮಾಡಿದ್ದಾರೆ. ಇದು ಇಡೀ ಭಾರತದ ಹೆಮ್ಮೆಯ ವಿಚಾರ. ಶಿಷ್ಟರ ರಕ್ಷಣೆ ದುಷ್ಟರ ಸಂಹಾರದ ರೀತಿಯಲ್ಲಿ ಉಗ್ರರ ತಾಣಗಳನ್ನ ಗುರುತಿಸಿ ಧ್ವಂಸ ಮಾಡಿದ್ದಾರೆ. ನಾಡಿನ ವೀರ ಮಾತೆಯರು ದೇಶ ಕಾಯುವವರಿಗೆ ಜನ್ಮ ಕೊಟ್ಟಿದ್ದೇ ಪುಣ್ಯ. ಸೈನಿಕರ ಕಲ್ಯಾಣ ಮಂಡಳಿ ರಚನೆಗೆ ಎಲ್ಲಾ ಪ್ರಯತ್ನ ಮಾಡ್ತೇವೆ. ನೀವೆಲ್ಲಾ ದೇಶದ ಜೊತೆ ಇದ್ದೀರಾ ನಾವೆಲ್ಲಾ ನಿಮ್ಮ ಜೊತೆ ಇರ್ತೇವೆ ಎಂದ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಯೋಧರಿಗಾಗಿ ಸಿಎಂ ಸಿದ್ದು ಮಹತ್ವದ ಘೋಷಣೆ
ಇದೇ ಸಂದರ್ಭದಲ್ಲಿ ಯೋಧರ ಕ್ಯಾಂಟೀನ್ಗೆ ಅಬಕಾರಿ ಸುಂಕ ಹಾಕುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ಹಾಗೆಯೇ ನಿವೃತ್ತ ಯೋಧರ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗುವುದು ಎಂದು ತಿಳಿಸಿದರು.