ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ ಮೈಸೂರು 3ನೇ ಸ್ಥಾನದಲ್ಲಿದೆ.

ಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ’ ಇಂದೋರ್ ಅನ್ನು ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಲಾಗಿದೆ. ಇದನ್ನೂ

ಇಂದೋರ್‌ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸಗಢದ ಅಂಬಿಕಾಪುರ 2 ಹಾಗೂ ಕರ್ನಾಟಕದ ಮೈಸೂರು 3 ಸ್ಥಾನ ಪಡೆದುಕೊಂಡಿವೆ. ಹತ್ತು ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಸ್ವಚ್ಛ ನಗರವಾಗಿ ಗುಜರಾತ್‌ನ ಅಹಮದಾಬಾದ್‌ ಹೊರಹೊಮ್ಮಿದೆ. ಛತ್ತೀಸಗಢದ ರಾಯ್ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ, ಗುಜರಾತ್‌ನ ಸೂರತ್‌ ನಂತರದ ಸ್ಥಾನದಲ್ಲಿವೆ.

‘ಸೂಪರ್ ಲೀಗ್’ ವಿಭಾಗವು ಹೊಸದಾಗಿ ಸೇರ್ಪಡೆಯಾಗಿದೆ. 2024 ರ ಜನವರಿಯಲ್ಲಿ ಘೋಷಿಸಲಾದ ಈ ಪ್ರಶಸ್ತಿಗಳ ಹಿಂದಿನ ಆವೃತ್ತಿಯಲ್ಲಿ, ಇಂದೋರ್ ಸತತ ಏಳನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿತು. ಸೂರತ್ ಜಂಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಪ್ಲೇಗ್ ಪೀಡಿತ ನಗರ ಎಂಬ ತನ್ನ ಹಿಂದಿನ ಪರಂಪರೆಯನ್ನು ಅಳಿಸಿಹಾಕಿದೆ.

Share.
Leave A Reply