ಮಹಾರಾಷ್ಟ್ರದಲ್ಲಿ ಮಾಲೇಗಾಂವ್‌ನಲ್ಲಿ ಬಾಂಬ್‌ ಬ್ಲ್ಯಾಸ್ಟ್‌ ಪ್ರಕರಣದ ತೀರ್ಪು ಹೊರಬಿದ್ದಿದೆ.. ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಂಗ್‌ ಸೇರಿ ಆರು ಆರೋಪಿಗಳಿಗೆ ಎನ್‌ಐಎ ಸ್ಪೆಷಲ್‌ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. 2008ರ ಮಾಲೆಗಾಂವ್​ ಸ್ಫೋಟ ಪ್ರಕರಣದ ಎಲ್ಲಾ 7 ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ಎನ್​ಐಎ ಕೋರ್ಟ್​ ತೀರ್ಪು ನೀಡಿದೆ.

ಪ್ರಕರಣದಲ್ಲಿ ಮಾಜಿ ಸಂಸದೆ ಪ್ರಜ್ಞಾಸಿಂಗ್​ ಠಾಕೂರ್​ ಹಾಗೂ ಲೆಫ್ಟಿನೆಂಟ್​ ಕರ್ನಲ್​ ಪ್ರಸಾದ್ ಪುರೋಹಿತ್​ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. 2008ರ ಸೆಪ್ಟೆಂಬರ್​ 29ರಂದು ಮಹಾರಾಷ್ಟ್ರದ ಸಮುದಾಯ ಸೂಕ್ಷ್ಮ ಪ್ರದೇಶವಾಗಿದ್ದ ಮಾಲೆಗಾಂವ್​ನಲ್ಲಿ ರಂಜಾನ್​ ಮಾಸದಲ್ಲಿ, ನವರಾತ್ರಿ ಮುನ್ನಾ ದಿನ ಈ ಸ್ಫೋಟ ನಡೆದಿತ್ತು. ಈ ವೇಳೆ 6 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಕಾರಣ, ಯಾವುದೇ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ನ್ಯಾಯಾಲಯವು ಕೇವಲ ಗ್ರಹಿಕೆ ಮತ್ತು ನೈತಿಕ ಪುರಾವೆಗಳ ಮೇಲೆ ಯಾರನ್ನೂ ಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಬಲವಾದ ಪುರಾವೆ ಬೇಕು ಅಂತಾ ಕೋರ್ಟ್​ ತಿಳಿಸಿದೆ.

Share.
Leave A Reply