ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಆಗ ಈಗ.. ಇವನೇ ಅವರ ಹುಡುಗ ಅಂತ ಸುದ್ದಿ ಆಗಿದ್ದೇ ಆಗಿದ್ದು.. ಆದ್ರೆ ಅನುಶ್ರೀ ಮಾತ್ರ ಮದುವೆಯಾಗಿರ್ಲಿಲ್ಲ.. ಬಹುವರ್ಷಗಳಿಂದ ಸಿಕ್ಕಾಪಟ್ಟೆ ಊಹಾಪೋಹಗಳು ಹರಿದಾಡ್ತಿದ್ವು.. ಆದ್ರೆ ಈಗ ಅದೆಲ್ಲದಕ್ಕೂ ತೆರೆ ಬಿದ್ದಿದೆ.. ಅನುಶ್ರೀಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ.. ಮದುವೆ ಗಂಡು ಯಾರು, ಮದುವೆ ಹೇಗಿರುತ್ತೆ..

37 ವರ್ಷದ ಅನುಶ್ರೀ ಅದೇಕೋ ಏನೋ ಇಲ್ಲಿವರೆಗೂ ಮದುವೆಯಾಗೋಕೆ ಮನಸ್ಸು ಮಾಡಿರ್ಲಿಲ್ಲ.. ಅಭಿಮಾನಿಗಳು, ಕುಟುಂಬದವ್ರು ಎಷ್ಟೇ ಒತ್ತಾಯ ಮಾಡಿದ್ರೂ ಇಲ್ಲಿವರೆಗೂ ವಿವಾಹವಾಗಿರ್ಲಿಲ್ಲ.. ಆದ್ರೆ ಈಗ ಅವೆಲ್ಲಕ್ಕೂ ತೆರೆ ಬಿದ್ದಿದೆ.. ಬೆಂಗಳೂರು ಮೂಲದ ಟೆಕ್ಕಿಯೊಬ್ಬರನ್ನ ಅನುಶ್ರೀ ಮದುವೆಯಾಗಲಿದ್ದಾರಂತೆ.. ಅದೂ ಕೂಡ ಅನುಶ್ರೀ ಅವರ ಮನೆಯವರೇ ಹುಡುಕಿದ ಹುಡುಗನ ಜೊತೆ ಸಪ್ತಪದಿ ತುಳಿಯಲಿದ್ದಾರಂತೆ.. ಈ ಬಗ್ಗೆ ಅನುಶ್ರೀ ಅವರು ಅಧಿಕೃತವಾಗಿ ಹೇಳದೇ ಇದ್ರೂ ಶೀಘ್ರದಲ್ಲಿ ರಿವೀಲ್‌ ಮಾಡಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ..

ಎಲ್ಲಿ, ಯಾವಾಗ ನಡೆಯುತ್ತೆ ಅನುಶ್ರೀ ವಿವಾಹ..?
ಅನುಶ್ರೀ ಈಗಾಗಲೇ ಇದೇ ವರ್ಷವೇ ನಾನು ಮದುವೆಯಾಗ್ತೇನೆ ಅಂತ ಹಲವಾರು ರಿಯಾಲಿಟಿ ಶೋಗಳಲ್ಲಿ ಹೇಳಿಕೊಂಡಿದ್ರು. ಅದೇ ರೀತಿ ನುಡಿದಂತೆ ನಡೆದುಕೊಂಡಿದ್ದಾರೆ. ರೋಷನ್‌ ಎಂಬ ಉದ್ಯಮಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡ್ತಿದ್ದಾರೆ.. ಆಗಸ್ಟ್‌ 28ರಂದು ಇವರಿಬ್ಬರ ಮದುವೆ ಆಗಲಿದೆ ಅನ್ನೋ ಸುದ್ದಿ ಸಖತ್‌ ವೈರಲ್‌ ಆಗಿದೆ.. ಅದು ಕೂಡ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಇರವ ಮದುವೆ ನಡೆಯಲಿದ್ಯಂತೆ.. ಸಿನಿಮಾ ರಂಗದವರೆಲ್ಲರಿಗೂ ಆಮಂತ್ರಣ ನೀಡಿ ಆಗಸ್ಟ್‌ 28ರಂದೇ ಭರ್ಜರಿಯಾಗಿ ಆರತಕ್ಷತೆ ನೇರವೇರಲಿದೆ.. ಅಂದಹಾಗೆ ತನ್ನ ಹುಡುಗ ಅವನ ಲೈಫ್‌ ಬಗ್ಗೆ ರೆಸ್ಪಾನ್ಸಿಬಲ್‌ ಆಗಿರಬೇಕು.. ಅವನೂ ಬದುಕಬೇಕು.. ನನ್ನನ್ನೂ ಬದುಕಲು ಬಿಡಬೇಕು ಅಂತ ಈ ಹಿಂದೆ ಅನುಶ್ರೀ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ರು…

Share.
Leave A Reply