ನರೇಂದ್ರ ಮೋದಿ.. (pm narendra modi) ಈ ದೇಶ ಕಂಡ ಪವರ್ಫುಲ್ ಪ್ರಧಾನಮಂತ್ರಿಗಳಲ್ಲಿ ಒಬ್ಬರು.. ವೈರಿ ದೇಶ ಪಾಕ್, ಗಡಿಯಲ್ಲಿ ಕಿರಿಕ್ ಮಾಡುವ ಚೀನಾಗೆ ನಡುಕ ಹುಟ್ಟಿಸುವ ವಿಶ್ವಗುರು.. ಅಷ್ಟೇ ಅಲ್ಲ.. ದೇಶದ ಮೂಲೆ ಮೂಲೆಗಳಲ್ಲಿ ಕಾಲಿಟ್ಟ ಕಡೆಯೆಲ್ಲಾ ಕೇಸರಿ ಬಿತ್ತಿದ ಪ್ರಧಾನಿ ಮೋದಿ, ಈಗ ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ.. ಪಿಎಂ ಮೋದಿ, ಇಂದಿರಾ ಗಾಂಧಿಯನ್ನೇ (Indira Gandhi) ಹಿಂದಿಕ್ಕಿದ್ದು, ಎರಡನೇ ಅತಿಹೆಚ್ಚು ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜರಾಗಿದ್ದಾರೆ..

ಇಂದಿರಾ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಪಿಎಂ ಮೋದಿ!
ಭಾರತಕ್ಕೆ (India) ಸ್ವಾತಂತ್ರ್ಯ ಸಿಕ್ಕ ನಂತರ 14 ಪ್ರಧಾನಮಂತ್ರಿಗಳು ಸೇವೆ ಸಲ್ಲಿಸಿ ಇತಿಹಾಸ ಪುಟ ಸೇರಿದ್ದಾರೆ. ಜವಾಹರಲಾಲ್ ನೆಹರು (Jawaharlal Nehru) ಮೊದಲನೇ ಪ್ರಧಾನಮಂತ್ರಿಯಾಗಿದ್ದು, ಒಟ್ಟು 4 ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.. ಆನಂತರದ ಸ್ಥಾನದಲ್ಲಿ ಇಂದಿರಾಗಾಂಧಿ ಇದ್ದು, ಇದೀಗ ಪ್ರಧಾನಿ ಮೋದಿಯವರು ಇಂದಿರಾ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈವರೆಗೆ ಅತಿಹೆಚ್ಚು ದಿನ ಸೇವೆ ಸಲ್ಲಿಸಿದ ಪ್ರಧಾನಮಂತ್ರಿಗಳ ಪಟ್ಟಿಯಲ್ಲಿ ಇಂದಿರಾ ಎರಡನೇ ಸ್ಥಾನದಲ್ಲಿದ್ದರು. ಇದೀಗ ಪ್ರಧಾನಿ ಮೋದಿ ಇಂದಿರಾ ಹಿಂದಿಕ್ಕಿ, ಎರಡನೇ ಸ್ಥಾನಕ್ಕೆ ಏರಿದ್ದಾರೆ.. ಹಾಗಾದ್ರೆ, ಯಾವ್ಯಾವ ಪ್ರಧಾನಿ ಎಷ್ಟೆಷ್ಟು ದಿನ ಸೇವೆ ಸಲ್ಲಿಸಿದ್ದಾರೆ ಅಂತಾ ನೋಡೋದಾದ್ರೆ,

ಪಿಎಂ ಆಗಿ ಮೋದಿ ದಾಖಲೆ!
ಸ್ವಾತಂತ್ರ್ಯಾ ನಂತರ ಮೊದಲ ಪ್ರಧಾನಿಯಾಗಿದ್ದ ನೆಹರು ಅತಿಹೆಚ್ಚು ದಿನ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 6,126 ದಿನಗಳು ಅಂದ್ರೆ 16 ವರ್ಷ 9 ತಿಂಗಳುಗಳ ಕಾಲ ನೆಹರು ಪ್ರಧಾನಿಯಾಗಿ ದಾಖಲೆ ನಿರ್ಮಿಸಿದ್ದಾರೆ. ಇದಾದ ನಂತರ ಇಂದಿರಾಗಾಂಧಿ 2ನೇ ಸ್ಥಾನದಲ್ಲಿದ್ದರು. ಬರೋಬ್ಬರಿ 4077 ದಿನ ಅಂದ್ರೆ 11 ವರ್ಷ 2 ತಿಂಗಳು ಕಾಲ ಪ್ರಧಾನಿಯಾಗಿ ಎರಡನೇ ಸ್ಥಾನದಲ್ಲಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು, ಇಂದಿರಾ ದಾಖಲೆ ಬ್ರೇಕ್ ಮಾಡಿದ್ದು, 4078 ದಿನಗಳ ಕಾಲ ಸೇವೆ ಸಲ್ಲಿಸಿ ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ.. 11 ವರ್ಷ 2 ತಿಂಗಳು ಸೇವೆ ಸಲ್ಲಿಸಿದ ಮೊದಲ ಕಾಂಗ್ರೆಸ್ಸೇತರ (congress) ಪಿಎಂ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು ವಿಶೇಷ..

3 ಬಾರಿ ಗುಜರಾತ್ (Gujarat) ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಮೋದಿ 2014ರಿಂದ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2 ಭಾರಿ ಯಶಸ್ವಿಯಾಗಿ ಭಾರತವನ್ನು ಮುನ್ನಡೆಸಿ ಸತತ ಮೂರನೇ ಬಾರಿಗೆ ಆಡಳಿತ ನಡೆಸುತ್ತಿದ್ದಾರೆ.. ನೆಹರು ದಾಖಲೆಯನ್ನು ಮುರಿಯಬೇಕಾದ್ರೆ ಮೋದಿ, ಈ ಅವಧಿ ಅಂದ್ರೆ 2029ರವರೆಗೂ ಸೇವೆ ಸಲ್ಲಿಸಿ ಮುಂದಿನ ಎಲೆಕ್ಷನ್ನಲ್ಲಿ ಗೆದ್ದು ಪ್ರಧಾನಿಯಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯ ಸೇವೆ ಸಲ್ಲಿಸಬೇಕಿದೆ.. ಆದ್ರೆ, ಆರ್ಎಸ್ಎಸ್ (RSS) ನಿಯಮದ ಪ್ರಕಾರ 75 ವರ್ಷ ಆದ ನಂತರ ರಾಜಕೀಯದಲ್ಲಿ ಮುಂದುವರಿಯುವಂತಿಲ್ಲ.. ಇದರ ಮಧ್ಯೆ ಸೆಪ್ಟೆಂಬರ್ 17ಕ್ಕೆ ಮೋದಿ 75 ವರ್ಷ ಪೂರೈಸಲಿದ್ದಾರೆ. ಸಹಜವಾಗಿಯೇ ಪ್ರಧಾನಿ ಮೋದಿ 75 ತುಂಬಿದ ನಂತರವೂ ಪಿಎಂ ಆಗಿ ಮುಂದುವರೀತಾರಾ? ನೆಹರು ದಾಖಲೆ ಮುರೀತಾರಾ ಅನ್ನೋದು ಎಲ್ಲರಲ್ಲೂ ಮೂಡಿರುವ ಪ್ರಶ್ನೆ.. ಮುಂದೇನಾಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
