ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ವೀಕ್ಷಕರಿಗೆ ಮತ್ತೊಂದು ಸುವರ್ಣಾವಕಾಶವನ್ನು ನೀಡುತ್ತಿದೆ. ಹೌದು, ಬಿಗ್ ಬಾಸ್ ಮನೆಯೊಳಗೆ ಒಮ್ಮೆಯಾದರೂ ಹೋಗಬೇಕು ಎಂದು ಕನಸು ಕಾಣುತ್ತಿರುವರಿಗೆ ಕಲರ್ಸ್ ಕನ್ನಡ ವಾಹಿನಿ ಒಂದು ಭರ್ಜರಿ ಅವಕಾಶ ಕಲ್ಪಿಸಿದೆ.‌ ನೀವು ಬಿಗ್ ಬಾಸ್ ಮನೆಯೊಳಗೆ ಹೋಗಬೇಕಾ? ಹಾಗಾದರೆ JioHotstarನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯನ್ನು ವೀಕ್ಷಿಸಿ ಅತಿ ಹೆಚ್ಚು ವಾಚ್‌ ಟೈಮ್ ದಾಖಲಿಸಿ ಪಾಯಿಂಟ್ಸ್ ಗಳಿಸಿ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿ. ಅಧಿಕ ವಾಚ್ ಟೈಮ್ ದಾಖಲಿಸಿ, ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿ ಟಾಪ್ ಪಟ್ಟಿ ಸೇರುವ 40 ಮಂದಿಗೆ Bigg Boss ಮನೆಯೊಳಗೆ ಅತಿಥಿಯಾಗಿ ಪ್ರವೇಶಿಸುವ ಸುವರ್ಣಾವಕಾಶ ನಿಮಗೆ ದೊರೆಯಲಿದೆ. ಮನರಂಜನೆ ಜೊತೆ ಜೊತೆಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅಪರೂಪದ ಅವಕಾಶವನ್ನು ಗೆಲ್ಲಲು ತಪ್ಪದೇ ಬಿಗ್ ಬಾಸ್ ಅಗ್ನಿಪರೀಕ್ಷೆಯನ್ನು ವೀಕ್ಷಿಸಿ, ನಿಮ್ಮ ಕನಸು ನನಸಾಗಿಸಿಕೊಳ್ಳಿ. ಮಿಸ್ ಮಾಡದೆ JioHotstarನಲ್ಲಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೀಕ್ಷಿಸಿ, ನಿಮ್ಮ ವಾಚ್‌ ಟೈಮ್ ಹೆಚ್ಚಿಸಿ, ಪಾಯಿಂಟ್ಸ್ ಗಳಿಸಿ ಮತ್ತು ಟಾಪ್ ಪಟ್ಟಿಯತ್ತ ಹೆಜ್ಜೆ ಇಡಿ.

Share.
Leave A Reply