ಕಾಂಗ್ರೆಸ್‌ ಸಂಸದ ಹಾಗೂ ಶಾಸಕರಿಗೆ ಬೆಳ್ಳಂಬೆಳ್ಳಗ್ಗೆ ಇ.ಡಿ ಶಾಕ್‌ ನೀಡಿದೆ. ಬಳ್ಳಾರಿ ಮತ್ತು ಬೆಂಗಳೂರಿನಲ್ಲಿರುವ ಕಾಂಗ್ರೆಸ್‌ ಶಾಸಕರು ಮತ್ತು ಸಂಸದರ ಮನೆ ಮೇಲೆ ದೀಢಿರ್‌ನೆ ಇ.ಡಿ ದಾಳಿ ಮಾಡಿದೆ. ಬಹು ಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ಕಾಂಗ್ರೆಸ್‌ ಶಾಸಕರು ಹಾಗೂ ಸಂಸದರ ಮನೆ ಹಾಗೂ ಕಚೇರಿಗಳ ಮೇಲೆದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿದ್ದಾರೆ. ಒಟ್ಟು 8 ಕಡೆ ಏಕಕಾಲಕ್ಕೆ ಇ.ಡಿ ಅಧಿಕಾರಿಗಳು ದಾಳಿ (ED) ಮಾಡಿದ್ದಾರೆ. 

ಏಲ್ಲೆಲ್ಲಿ, ಯಾರ್ಯಾರ ಮನೆ ಮೇಲೆ ಇ.ಡಿ ರೇಡ್‌

ಬಳ್ಳಾರಿ ನಗರ ಶಾಸಕ ನಾ.ರಾ.ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಶ್ರೀನಿವಾಸ್, ಕಂಪ್ಲಿ ಶಾಸಕ‌ ಜೆ.ಎನ್.ಗಣೇಶ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ಸಹಾಯಕ ಗೋವರ್ದನ್ ನಿವಾಸಗಳ ಮೇಲೆ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಸಂಡೂರಿನ ಸಂಸದ ತುಕಾರಾಂ, ಸೇರಿದಂತೆ ಇತರರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಶಾಸಕರ ಭವನದ ಕೊಠಡಿಯಲ್ಲೂ ಶೋಧ ನಡೆಸಿದ್ದು, ಮಾಹಿತಿ ಸಂಗ್ರಹಕ್ಕೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡ್ತಿದ್ದಾರೆ.

ಇಡಿಯಿಂದ ದಾಖಲೆಗಳ ಪರಿಶೀಲನೆ

ಕಳೆದ ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಏಕಾಏಕಿ ಇಡಿಯಿಂದ ದಾಳಿ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ , ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನ ಸಭೆ ಕ್ಷೇತ್ರದಲ್ಲಿ ಇಪ್ಪತ್ತು ಕೋಟಿಗೂ ಹೆಚ್ಚು ಹಣವನ್ನು ಹಂಚಿಕೆ ಮಾಡಿದ್ರು ಎಂದು ಆರೋಪಿಸಲಾಗಿತ್ತು.

ಹೀಗಾಗಿ ಇದೀಗ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ, ಕಂಪ್ಲಿ ಶಾಸಕ ಗಣೇಶ ಮತ್ತು ಸಂಸದ ತುಕಾರಾಂ ಅವರ ಸಂಡೂರಿನ ಮನೆ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.

ಎಂಟು ತಂಡವಾಗಿ ಬಂದಿರೋ ಇಡಿ ಅಧಿಕಾರಿಗಳು ಕಂಪ್ಲಿ ಮತ್ತು ಕುರುಗೋಡು ಶಾಸಕ ಗಣೇಶ ನಿವಾಸ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗ್ತಿದೆ. ಇತ್ತ ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಮನೆ ಮತ್ತು ಗೃಹ ಕಚೇರಿಯಲ್ಲಿ ಪರಿಶೀಲನೆ, ಬಳ್ಳಾರಿ ನಗರದ ನಾಗೇಂದ್ರ ಮತ್ತು ಭರತ್ ರೆಡ್ಡಿ ಮನೆ ಕಚೇರಿಯಲ್ಲಿ ಪರಿಶೀಲನೆ, ಸಂಡೂರಿನ ಸಂಸದ ತುಕಾರಾಂ ಮನೆ ಮೇಲೂ ದಾಳಿ ನಡೆಸಲಾಗಿದ್ದು, ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ.

ಶಾಸಕ ಬಿ.ನಾಗೇಂದ್ರ ನಿವಾಸದ ಮೇಲೂ ರೇಡ್‌

ಇನ್ನು ಈಗಾಗಲೇ ಪ್ರಕರಣದಲ್ಲಿ ಅರೆಸ್ಟ್ ಆಗಿ ಬೇಲ್​ ಪಡೆದಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ನಿವಾಸದ ಮೇಲೆ ಕೂಡ ರೇಡ್ ಮಾಡಲಾಗಿದೆ. ಬಿ.ನಾಗೇಂದ್ರಗೆ ಸೇರಿದ ಬೆಂಗಳೂರಿನಲ್ಲಿ ಶಾಸಕರ ಭವನದ ಕೊಠಡಿ ನಂಬರ್ 360ರಲ್ಲಿ ಮೇಲೂ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ತನಿಖೆ ಮುಗಿದಿದೆ ಎನ್ನುವ ಹೊತ್ತಿನಲ್ಲೇ ಮತ್ತೆ ದಾಳಿ ಮಾಡಲಾಗಿದೆ.

Read Also : ಕಮಲ್‌ ಥಗ್‌ಲೈಫ್‌ಗೆ ಬಿಗ್‌ ಶಾಕ್..’ಸುಪ್ರೀಂ’ನಲ್ಲೂ ಮುಖಭಂಗ!

Share.
Leave A Reply