ಮಗಳನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದ ಪೋಷಕರನ್ನು ಖುದ್ದು ಸಚಿವ Chaluvarayaswamy ಭೇಟಿಯಾಗಿದ್ದಾರೆ. ಈ ವೇಳೆ ತಂದೆ ಅಶೋಕ್ ಮೊಬೈಲ್‌ನಲ್ಲಿ ಸಚಿವ ಚಲುವರಾಯಸ್ವಾಮಿಗೆ ಮಗಳ ಫೋಟೋ ತೋರಿಸಿದ್ದಾರೆ. ನೋಡಿ ಸರ್ ನನ್ನ ಮಗಳು ಹೇಗ್ ಇದ್ದಳು. ನನಗೆ ಅನ್ನವನ್ನು ತಿನ್ನಿಸುತ್ತಿದ್ದಳು. ಪಪ್ಪಾ ನನಗೆ ನೀನೇ ಸ್ನಾನ ಮಾಡಿಸು ಅಂತಾ ಹೇಳುತ್ತಿದ್ದಳು. ಈಗ ನಾನ್ ಏನು ಮಾಡೋದು ಸರ್ ಅಂತ ಕಣ್ಣೀರು ಹಾಕಿದ್ದಾರೆ.
ಅಲ್ಲದೇ ನನ್ನ ಮಗಳಿಗೆ ಮದ್ದೂರಲ್ಲಿ ಚಿಕಿತ್ಸೆ ಕೊಟ್ಟಿದ್ರೆ ಹೀಗೆ ಆಗ್ತಾ ಇರಲಿಲ್ಲ. ಒಂದು ಇಂಜಕ್ಷನ್ ಕೊಟ್ಟಿದ್ರೆ ನಾವು ಮಂಡ್ಯಗೆ ಹೋಗ್ತಾ ಇರಲಿಲ್ಲ. ಮಂಡ್ಯಗೆ ಹೋಗಬೇಕು ಅಂದಾಗ ಅಂಬ್ಯುಲೆನ್ಸ್ ಕೊಡಿ ಅಂತಾ ಕೇಳಿದ್ದೆ. ಅವರು ನಮಗೆ ಆಂಬ್ಯುಲೆನ್ಸ್ ಇಲ್ಲ ಅಂದ್ರು.
ಬಳಿಕ ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ಪೊಲೀಸರಿಂದ ನನ್ನ ಮಗಳು ಸತ್ತಳು ಅಂತ ಕಣ್ಣೀರು ಇಟ್ಟಿದ್ದಾರೆ. ಇದಾದ ಬಳಿಕ ಅಶೋಕ್ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದುವರೆ ಲಕ್ಷ ಹಣವನ್ನು ಪರಿಹಾರವಾಗಿ ಸಚಿವ ಚಲುವರಾಯಸ್ವಾಮಿ ಕೊಟ್ಟು ಸಾಂತ್ವನ ಹೇಳಿದ್ದಾರೆ.


ನಿನ್ನೆ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಗು ಬಲಿಯಾಗಿತ್ತು. ವಾಣಿ-ಅಶೋಕ್ ಪುತ್ರಿ ಹೃತೀಕ್ಷಾಗೆ ನಾಯಿ ಕಚ್ಚಿತ್ತು. ಹೀಗಾಗಿ ಆ ಕೂಡಲೇ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.
Also Read: Yatnal ಬಳಿಕ ಬಿಜೆಪಿಯ ಮತ್ತಿಬ್ಬರು ಶಾಸಕರ ಉಚ್ಚಾಟನೆ!
ಇದೇ ವೇಳೆ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗೆಂದು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಹೃತೀಕ್ಷಾಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ.