ಧರ್ಮಸ್ಥಳ.. (Dharmasthala) ಧಾರ್ಮಿಕವಾಗಿ ಪ್ರಸಿದ್ಧವಾಗಿರುವ ಕೇಂದ್ರ.. ಆದ್ರೆ ಇದೀಗ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಕ್ಷೇತ್ರ.. ಅನಾಮಿಕನ ಹೇಳಿಕೆ ದಾಖಲಿಸಿ, ಸಮಾಧಿಯಾಗಿರುವ ಶವಗಳ ಹುಡುಕಿ ಹೊರಟ ಎಸ್‌ಐಟಿಗೆ (SIT) ಸಿಕ್ಕ ಕುರುಹುಗಳೇನು..? ಈಗಾಗಲೇ ಸಿಕ್ಕ ಕಳೇಬರ ಇಡೀ ಧರ್ಮಸ್ಥಳ ರಕ್ತ ಚರಿತ್ರೆಯ ಸಾಕ್ಷಿ ಹೇಳುತ್ತಾ? ಮಿಕ್ಕಿರುವ ಸ್ಥಳಗಳಲ್ಲಿ ಲೆಕ್ಕೇ ಸಿಗದಷ್ಟು ಅಸ್ತಿಪಂಜರಗಳು ಸಿಗುತ್ತಾ..?

ಯಾವಾಗ ಅನಾಮಿಕ ವ್ಯಕ್ತಿ ತಾನು ನೇತ್ರಾವತಿ ತಟದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ (burial case) ಅಂತ ಹೇಳಿಕೆ ದಾಖಲಿಸಿದನೋ.. ಆಗ್ಲೇ ಈ ಪ್ರಕರಣ ದೇಶದ ತುಂಬೆಲ್ಲಾ ಹಲ್‌ಚಲ್ ಎಬ್ಬಿಸಿತು.. ದಿನಗಳೆದಂತೆ ಅದರ ಮೇಲಿದ್ದ ಕುತೂಹಲ ಇನ್ನಷ್ಟು ಹೆಚ್ಚಿಸಿತು.. ಎಲ್ಲರ ಬೇಡಿಕೆಯಂತೆ ಎಸ್‌ಐಟಿ ಕೂಡ ಎಂಟ್ರಿ ಕೊಡ್ತು.. IPS ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲೇ ತನಿಖೆ ಕೂಡ ಶುರುವಾಯ್ತು.. ಆದ್ರೆ ಆರಂಭಿಕವಾಗಿ ಈ ಪ್ರಕರಣ ಭಾರೀ ಹಿನ್ನಡೆ ಪಡೆದಿತ್ತು.. ಯಾಕಂದ್ರೆ ಪಾಯಿಂಟ್ ನಂಬರ್ 1ರಲ್ಲಿ ಪಾನ್ ಕಾರ್ಡ್, ಎಟಿಎಂ ಕಾರ್ಡ್‌ಗಳು ಬಿಟ್ರೆ ಉಳಿದ 4 ಪಾಯಿಂಟ್‌ಗಳಲ್ಲಿ ಏನೂ ಸಿಕ್ಕಿರಲಿಲ್ಲ.. ಒಂದ್ಕಡೆ ಸಿಕ್ಕ ಕಾರ್ಡ್‌ಗಳ ಬಗ್ಗೆ ತನಿಖೆ ಆರಂಭಿಸಿದ್ರೆ ಮತ್ತೊಂದ್ಕಡೆ ದೂರುದಾರನನ್ನು ಸಾಕಷ್ಟು ಟ್ರೋಲ್ ಮಾಡಲಾಗ್ತಿತ್ತು.. ಇದೆಲ್ಲದರ ಮಧ್ಯೆ ಅದೊಂದು ಪಾಯಿಂಟ್ ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ..

ದೂರುದಾರ ತೋರಿಸಿದ 5 ಸ್ಥಳಗಳನ್ನು ಅಗೆದು ಅಗೆದು ಏನು ಸಿಗದೇ ಸುಸ್ತಾಗಿದ್ದ ಅಧಿಕಾರಿಗಳು ಆರನೇ ಸ್ಥಳದಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಅಸ್ತಿಪಂಜರದ ಅವಶೇಷಗಳನ್ನು ಕಂಡು ಥಂಡಾ ಹೊಡೆದಿದ್ರು. ಇದೇ ಮೂಳೆಗಳು ಮುಂದಿನ ಶೋಧ ಕಾರ್ಯಾಚರಣೆಗೆ ಇನ್ನಷ್ಟು ಫೋರ್ಸ್ ಕೊಟ್ಟಿದ್ದು.. ಅವುಗಳನ್ನು ಸೇಫ್ ಆಗಿ ಫಾರೆನ್ಸಿಕ್ ಲ್ಯಾಬ್‌ಗೆ (forensic lab) ರವಾನಿಸಲಾಗ್ತಿದೆ.. ಅತ್ತ ಮೂಳೆಗಳು ಯಾರದ್ದು..? ಅವ್ರು ಹೇಗೆ ಸತ್ತರು ಅಂತ ತನಿಖೆ ನಡೆಯುತ್ತಿದ್ರೆ ಇತ್ತ ಉಳಿದ ಸ್ಥಳಗಳಲ್ಲಿ ಎಸ್‌ಐಟಿ ತನ್ನ ಬೇಟೆ ಮುಂದುವರಿಸಿ 7ನೇ, 8ನೇ ಸ್ಥಳದಲ್ಲೂ ಕಾರ್ಯಾಚರಣೆ ಮುಂದುವರಿಸಿತು.. ಆದ್ರೆ ಅಲ್ಲಿ ಕೂಡ ಏನು ಸಿಗಲಿಲ್ಲ.. ಹೀಗಾಗಿ ಉಳಿದ 9, 10, 11, 12 ಹಾಗೂ 13ನೇ ಸ್ಥಳಗಳಲ್ಲಿ ಅಗೆಯುವ ಕಾರ್ಯಾಚರಣೆಗೆ ಹೆಜ್ಜೆ ಇಟ್ಟಿದೆ..

9 ಹಾಗೂ 13ನೇ ಪಾಯಿಂಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಶವಗಳನ್ನು ಹೂತಿದ್ದೇನೆ ಅಂತ ಅನಾಮಿಕ ವ್ಯಕ್ತಿ ಹೇಳಿದ್ದಾನಂತೆ.. 2ನೇ ಸ್ಥಳ ಅಗೆಯುವಾಗಲೇ ಈ ಮಾಹಿತಿಯನ್ನು ದೂರುದಾರ ಕೊಟ್ಟಿದ್ದಾನೆ ಅಂತ ಹೇಳಲಾಗ್ತಿದೆ.. ಹೀಗಾಗಿ ಆ ಸ್ಥಳಗಳು ಭಾರೀ ನಿರೀಕ್ಷೆ ಹುಟ್ಟುಹಾಕಿದೆ.. ಆ ಸ್ಥಳಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.. ಒಂದು ವೇಳೆ ಅವನು ಹೇಳಿದಂತೆ ಅಲ್ಲಿ ಸಾಕಷ್ಟು ಕಳೇಬರಗಳು ಸಿಕ್ರೆ ಪ್ರಕರಣದ ದಿಕ್ಕೇ ಬದಲಾಗಲಿದೆ.. ಸದ್ಯ ಅಗೆಯುವ ಕಾರ್ಯಾಚರಣೆ ಮುಂದುವರಿದಿದ್ದು ಮುಂದೆ ಏನೇನು ಸಿಗುತ್ತೋ ಕಾದು ನೋಡಬೇಕಿದೆ..
