CM Siddaramaiah Held Disha Meeting : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನದಲ್ಲಿ ಭಾರೀ ಕಡಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಅಂಕಿ- ಅಂಶಗಳ ಜತೆ ಈ ಕುರಿತಾಗಿ ಇಂಚಿಂಚೂ ಮಾಹಿತಿಯನ್ನು ನೀಡಿದರು. ಕೇಂದ್ರದಿಂದ ಇನ್ನೂ ನರೇಗಾ ಹಣ ಬಾರದ ಅಂಕಿ ಅಂಶಗಳನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಕೇಂದ್ರ ಪಿಂಚಣಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆಯೂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24960 ಕೋಟಿ. ಕೇಂದ್ರದ ಅನುದಾನ 22758ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18561ಕೋಟಿ ಮಾತ್ರ ಬಿಡುಗಡೆ ಆಗಿದೆ. 4195 ಕೋಟಿ ರೂಪಾಯಿ ಬಿಡುಗಡೆ ಆಗಿರುವುದಿಲ್ಲ. ರಾಜ್ಯಕ್ಕೆ ಬರಬೇಕಾಗಿರುವ ಹಣವನ್ನು ಸರಿಯಾಗಿ ಬಿಡುಗಡೆ ಮಾಡದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಹಲವು ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಖರ್ಚು ಮಾಡುತ್ತೆ.. ಇದಕ್ಕಾಗಿ ಎರಡು ಸರ್ಕಾರಗಳು ಹಣ ಮೀಸಲು ಇಡುತ್ತವೆ. ಆಯಾಯ ಯೋಜನೆಗಳಿಗೆ ಎಷ್ಟೇಷ್ಟು ಹಣ ಎಂದು ಡಿಸೈಡ್ ಆಗುತ್ತವೆ. ಕೆಲವೊಂದು ಯೋಜನೆಗಳಿಗೆ ಕೇಂದ್ರ 50% ಕೊಟ್ರೆ ರಾಜ್ಯ ಸರ್ಕಾರ 50% ಕೊಡುತ್ತೆ.. ಕೆಲವೊಂದು ಯೋಜನೆಗಳಲ್ಲಿ 30% ಹಾಗೂ 70% ಇರುತ್ತೆ ಎಂದು ತಿಳಿಸಿದ್ರು.
ಭದ್ರ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್ನಲ್ಲಿ 5360 ಕೋಟಿ ಅನುದಾನ ಘೋಷಣೆ ಹಾಗಿದ್ದರೂ ಒಂದು ರೂಪಾಯಿ ಕೂಡಾ ಈವರೆಗೂ ಬಿಡುಗಡೆ ಆಗಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಎರಡು ಬಾರಿ ನಿಯೋಗದೊಂದಿಗೆ ಭೇಟಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದರು.
ದಿಶಾ ಸಮಿತಿ ಸದಸ್ಯರು ರಾಜ್ಯಕ್ಕೆ ಕೇಂದ್ರದ ಪಾಲನ್ನು ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ಸೂಚಿಸಿದರು. ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ಪಿಂಚಣಿ, ವೃದ್ದಾಪ್ಯ ಪಿಂಚಣಿ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ರಾಜ್ಯದ ಅನುದಾನ 5665.95 ಕೋಟಿ, ಕೇಂದ್ರದ ಅನುದಾನ 559.61ಕೋಟಿ ಆದರೆ ಕೇಂದ್ರದಿಂದ ಬಿಡುಗಡೆ ಆಗಿರುವುದು 113.92ಕೋಟಿ ಮಾತ್ರ . ಸಾಮಾಜಿಕ ಯೋಜನೆಗಳಲ್ಲೂ ಕಡಿತ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಜಿಲ್ಲಾ ಮಟ್ಟದಲ್ಲಿ ದಿಶಾ ಸಭೆಗಳು ನಿಗಧಿತವಾಗಿ ನಡೆಯಬೇಕು ಎಂದು ಸೂಚನೆ ನೀಡಿದ ಮುಖ್ಯಮಂತ್ರಿಗಳು ಸಂಸದರೂ ಈ ಬಗ್ಗೆ ಆಸಕ್ತಿ ವಹಿಸಬೇಕು ಎಂದರು. ಮೂರು ತಿಂಗಳ ಒಳಗೆ ನರೇಗಾ ಕ್ರಿಯಾ ಯೋಜನೆ ಕಡ್ಡಾಯ ವಾಗಿ ಸಿದ್ದಪಡಿಸಬೇಕು. ಏನೇ ಕಾರಣದಿಂದ ಹಿಂದಿನ ಕ್ರಿಯಾ ಯೋಜನೆ ಆಗಿದ್ದರೆ ಅದನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಎಂದು ಸಿಎಂ ಸೂಚನೆ ನೀಡಿದರು.
Also Read: BSF Jawan, Returns To India : ಭಾರತಕ್ಕೆ ಪಾಕ್‌ನಿಂದ ಯೋಧ ಹಸ್ತಾಂತರ..!
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರದಿಂದ ಬರಬೇಕಾಗಿದ್ದ ಎರಡು ವರ್ಷದ ಪಾಲು 10000 ಬಾಕಿ ಕೋಟಿಯಷ್ಟು ಬಾಕಿ ಉಳಿದಿದೆ. ಹೀಗೆ ಬಾಕಿ ಉಳಿಸಿಕೊಂಡಿರುವುದರಿಂದ ಬಹಳ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.
