ಶುಭ ಶುಕ್ರವಾರದಂದೆ ಸಿನಿಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್ ಸಿಕ್ಕಿದೆ. ಏನಪ್ಪಾ ಥಿಯೇಟರ್‌ಗೆ ಹೋಗಿ ಒಂದ್ ಮೂವಿ ನೋಡಲಿಕೆ ಆಗ್ತಿಲ್ಲಾ.. ಅಷ್ಟು ಇದೆ ಟಿಕೆಟ್ ಪ್ರೈಸ್ ಅನ್ನೊರಿಗೆ. ರಾಜ್ಯಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. ಸಿನಿಪ್ರಿಯರು ಇನ್ಮುಂದೆ ಥಿಯೇಟರ್‌ಗೆ ಚಿಂತೆಯಿಲ್ಲದೇ ಜೇಬಲ್ಲಿ ಇನ್ನೂರೂಪಾಯಿ ಇಟ್ಕೊಂಡು ಹೋದ್ರೂ ಸಾಕು.. ನೀವು ನೋಡಬೇಕೆಂದೆರೋ ಸಿನಿಮಾದ ಟಿಕೆಟ್ ನಿಮ್ಮ ಕೈ ಸೇರುತ್ತೆ.
ಹೌದು.. ರಾಜ್ಯದಲ್ಲಿ ಚಿತ್ರ ಮಂದಿರಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾದ ಕಾರಣ ಅನೇಕ ಚಿತ್ರಮಂದಿರಗಳು ಮುಚ್ಚಿಹೋಗಿವೆ, ಕನ್ನಡ ಚಿತ್ರರಂಗ ಅನೇಕಸವಾಲುಗಳನ್ನ ಎದುರಿಸುತ್ತೆ, ಇಂಥ ಸಮಯದಲ್ಲಿ ರಾಜ್ಯ ಸರ್ಕಾರ ಮಹತ್ತರ ನಿರ್ಧಾರವನ್ನ ಕೈಗೊಂಡಿದೆ. ಹೌದು ಸಿನಿಮಾಗ ಟಿಕೆಟ್ ದರ ದುಬಾರಿ ಆಗುತ್ತಿರುವ ಕಾರಣ ಅನೇಕರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಅದರಲ್ಲೂ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗುತ್ತವೆ ಎಂದರೆ ಟಿಕೆಟ್ ದರ 500ರಿಂದ ಆರಂಭವಾಗಿ 1000 ರೂಪಾಯಿ ತಲುಪಿದ ಉದಾಹರಣೆಗಳು ಸಹ ಇದೆ.
ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತರೋದಾಗಿ ಹೇಳಿತ್ತು. ಈಗ ಸೆಪ್ಟೆಂಬರ್ 12ರಿಂದ ಈ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣವೇ ಇಲ್ಲದಂತಾಗಿತ್ತು, ಈ ಆದೇಶವು ಸೆಪ್ಟೆಂಬರ್ 12ರಿಂದಲೇ ಅನ್ವಯ ಆಗಲಿದೆ. ಇದರ ಪ್ರಕಾರ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ನ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಮಾಡಬಹುದು ಎಂದು ಆದೇಶಿಸಿದೆ. ಗೋಲ್ಡ್ ಕ್ಲಾಸ್ ವ್ಯವಸ್ಥೆ ಇದ್ದಲ್ಲಿ ಮಾತ್ರ ತಮ್ಮಿಷ್ಟದ ದರ ನಿಗದಿ ಮಾಡಬಹುದು ಎಂದು ಆದೇಶದಲ್ಲಿ ಉಲ್ಲೆಖಿಸಿದೆ. ಈ ಸುದ್ದಿ ಸಿನಿ ಪ್ರಿಯರಿಗೆ ಖುಷಿಕೊಟ್ಟಿದ್ದು ಇನ್ನಾದರು ಚಿತ್ರಮಂದಿರಗಳು ಭರಿಯಾಗುತ್ತಾ ಕಾದು ನೋಡಬೇಕಿದೆ
Read Also : ರಾಜ್ಯದಲ್ಲಿ ಮತ್ತೆ ಜಾತಿಗಣತಿ ಶುರು.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
