ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಬಯೋಕಾನ್ ಕಚೇರಿ ಉದ್ಯೋಗಿ ಕಟ್ಟಡದ ನಾಲ್ಕನೇ ಮಹಡಿಯಿಂದ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

26 ವರ್ಷದ ಉದ್ಯೋಗಿ ಅನುಂತ ಕುಮಾರ್ ಸಾವನ್ನಪ್ಪಿರುವ ಉದ್ಯೋಗಿ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ನಾಲ್ಕನೇ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅವರೇ ಬಿದ್ದಿದ್ದಾರೋ? ಅಥವಾ ಬೇರೆಯಾದರೂ ತಳ್ಳಿದ್ದಾರೋ? ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಆಯ ತಪ್ಪಿ ಬಿದ್ದಿದ್ದಾರೋ? ಎಂಬುವುದು ಕೂಡ ಗೊತ್ತಾಗಿಲ್ಲ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಕೂಡ ಸಿಕ್ಕಿಲ್ಲ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫೇಸ್-II ನಲ್ಲಿರುವ ಬಯೋಕಾನ್ ಕಂಪನಿಯ ಆವರಣದಲ್ಲಿ ಈ ಘಟನೆ ನಡೆದಿದೆ. ಅನಂತಕುಮಾರ್ ಬೆಂಗಳೂರಿನ ಬನಶಂಕರಿ ಪ್ರದೇಶದ ನಿವಾಸಿ. ಘಟನೆಯ ನಂತರ, ಕುಮಾರ್ ಅವರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಈ ಕುರಿತು ಕಂಪನಿ ಪ್ರತಿಕ್ರಿಯೆ ನೀಡಿದ್ದು, “ಬೆಂಗಳೂರಿನಲ್ಲಿ ನಮ್ಮ ಒಬ್ಬ ಉದ್ಯೋಗಿ ನಿಧನರಾದ ಬಗ್ಗೆ ನಾವು ತೀವ್ರ ದುಃಖಿತರಾಗಿದ್ದೇವೆ. ಕಠಿಣ ಸಮಯದಲ್ಲಿ ಅವರ ಕುಟುಂಬಕ್ಕೆ ನಮ್ಮ ಆಲೋಚನೆಗಳು ಮತ್ತು ಹೃತ್ಪೂರ್ವಕ ಸಂತಾಪಗಳು ಸಲ್ಲಿಸುತ್ತೇವೆ. ಪ್ರಸ್ತುತ ಅಧಿಕಾರಿಗಳಿಂದ ತನಿಖೆಗೆ ಒಳಪಟ್ಟಿದೆ, ಆದ್ದರಿಂದ ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಮಗೆ ಸಾಧ್ಯವಿಲ್ಲ” ಎಂದು ಕಂಪನಿ ಹೇಳಿದೆ.

Share.
Leave A Reply