ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ 2026ರ ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಈ ಮಧ್ಯೆ ಚಿತ್ರ ತಂಡವು ನಟಿ ನಯನತಾರಾ ಪಾತ್ರದ ಫುಸ್ಟ್ ಲುಕ್ ಬಿಡುಗಡೆ ಮಾಡಿದೆ.

ಫಸ್ಟ್ ಲುಕ್ ಬಿಡುಗಡೆಯಾಗಿದ್ದೇ ತಡ ಅಭಿಮಾನಿಗಳಲ್ಲಿ ಚಿತ್ರದ ಕ್ರೇಜ್ ಹೆಚ್ಚಾಗುತ್ತಿದೆ. ಈ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ, ನಟಿ ನಯನತಾರಾ ಅವರ ‘ಗಂಗಾ’ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಗಂಗಾ ಪಾತ್ರವು ಟಾಕ್ಸಿಕ್ (Toxic) ಸಿನಿಮಾದಲ್ಲಿನ ಪ್ರಬಲ ಪಾತ್ರ ಎನ್ನಲಾಗುತ್ತಿದೆ.

ನಯನತಾರಾ ಅವರು ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಹಿಂದೆ ಉಪೇಂದ್ರ ಅವರ ಸೂಪರ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಗಂಗಾ ಪಾತ್ರದಲ್ಲಿ ನಯನತಾರಾ ಅದ್ಭುತವಾಗಿ ಕಂಡಿದ್ದಾರೆ. ಭಯರಹಿತ ವ್ಯಕ್ತಿತ್ವ ಈ ಫಸ್ಟ್‌ ಲುಕ್‌ನಲ್ಲಿ ಎದ್ದು ಕಾಣುತ್ತಿದೆ. ಕೈಯಲ್ಲಿ ಗನ್ ಹಿಡಿದು ನೀಡಿರುವ ಪೋಸ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಸದ್ಯ ನಯನತಾರಾ ಅವರ ಫಸ್ಟ್ ಲುಕ್ ನೋಡಿದ ಅವರ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ನಯನತಾರಾಗೂ ನಟರಷ್ಟೇ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಅವರ ಚಿತ್ರಕ್ಕಾಗಿ ಈಗ ಕಾಯುತ್ತಿದ್ದಾರೆ.

Share.
Leave A Reply