ಕೊಡಗಿನ ಬೆಡಗಿ ರಶ್ಮಿಕಾ ಒಂದಲ್ಲ ಒಂದು ವಿಷಯಕ್ಕೆ ವೈರಲ್‌ ಆಗ್ತಾನೇ ಇರ್ತಾರೆ. ಆದ್ರೀಗ ಮತ್ತೊಂದು ವಿಚಾರಕ್ಕೆ ಶ್ರೀವಲ್ಲಿ ಭಾರಿ ಸುದ್ದಿಯಲ್ಲಿದ್ದು, ಸದ್ದಿಲ್ಲದೇ ಎಂಗೇಜ್‌ ಆದ್ರಾ ಅಂತಾ ನೆಟ್ಟಿಗರು ಪ್ರಶ್ನಿಸುವಂತಾಗಿದೆ. ರಶ್ಮಿಕಾ ಮಂದಣ್ಣ ಕೈನಲ್ಲಿ ಹೊಳೆಯುತ್ತಿರುವ ರಿಂಗ್ ಎಲ್ಲರ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ, ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಅನ್ನೋ ಚರ್ಚೆ ಜೋರು ನಡೆದಿದೆ. ಸೈಮಾ ಅವಾರ್ಡ್‌ 2025 ರ ರೆಡ್ ಕಾರ್ಪೆಟ್ ಮೇಲೆ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬೆರಳಿಗೆ ಉಂಗುರ ಹಾಕಿರುವುದು ಫೋಟೋದಲ್ಲಿ ಕಂಡುಬಂದಿದೆ. ದುಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಫೋಟೋಗೆ ಪೋಸ್‌ ಕೊಟ್ಟಿದ್ದು, ಅದರಲ್ಲಿ ಅವರ ಕೈ ಬೆರಳಿನಲ್ಲಿರುವ ಉಂಗುರ ಮಿರ ಮಿರ ಮಿಂಚಿದೆ. ಇದನ್ನು ನೋಡಿದ ಜನರು ನ್ಯಾಷನಲ್‌ ಕ್ರಶ್‌ ಗುಟ್ಟಾಗಿ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದ್ಕಡೆ, ರಶ್ಮಿಕಾ ಗೆಳೆಯ ವಿಜಯ್ ದೇವರಕೊಂಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Read Also : ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್‌ಗೆ 1.14 ಲಕ್ಷ ದಂಡ.. ಫೈನ್‌ ಕಟ್ಟಲು 25 ದಿನ ಗಡುವು..!

Share.
Leave A Reply