ಉದ್ಯಮಿ ಕೆಜಿಎಫ್ ಬಾಬುಗೆ ಬೆಳ್ಳಂಬೆಳಗ್ಗೆ ಆರ್​ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟಿಲ್ಲ ಎಂದು ಕಾರು ಸೀಜ್ ಮಾಡಲು ಆರ್​ಟಿಓ ಅಧಿಕಾರಿಗಳು ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ.

ರೋಲ್ಸ್​ ರಾಯ್ಸ್, ವೆಲ್ಫೇರ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಕೆಜಿಎಫ್ ಬಾಬು ಹೊಂದಿದ್ದಾರೆ. ಆರ್​ಟಿಓ ಅಧಿಕಾರಿಗಳು, ಕೆಜಿಎಫ್​ ಬಾಬು ಬಳಿಯಿರುವ ಕಾರುಗಳ ಲಿಸ್ಟ್ ಮಾಡಿಕೊಂಡು ದಾಳಿ ಮಾಡಿದ್ದಾರೆ. ಆರ್​ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದಲ್ಲಿ ದಾಳಿಯಾಗಿದೆ. ಐಷಾರಾಮಿ ಕಾರುಗಳು ಬೇರೆಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿದೆ. ಹಾಗಾಗಿ ಟ್ಯಾಕ್ಸ್ ಕಟ್ಟಿರುವ ಬಗ್ಗೆ ಪರಿಶೀಲನೆ ಮಾಡಲು ಆರ್​ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.

Share.
Leave A Reply