ಆರ್‌ಸಿಬಿ ಫ್ಯಾನ್ಸ್‌ಗಳ ಅಭಿಮಾನ ಮುಗಿಲು ಮುಟ್ಟಿದೆ.. ಸತತ ಸೋಲುಗಳ ಬಳಿಕ ನಿನ್ನೆ ಪಂಜಾಬ್‌ ವಿರುದ್ಧ ಕಪ್‌ ಗೆದ್ದು ಬೆಂಗಳೂರಿಗೆ ಆರ್‌ಸಿಬಿ ಗೆಲುವಿನ ಕೀರಿಟ ಕೊಟ್ಟಿದೆ.. ಬೆಂಗಳೂರಿಗೆ ಬಂದ ಐಪಿಎಲ್‌ ಚಾಂಪಿಯನ್ಸ್‌ ತಂಡ ವನ್ನ ಅದ್ಧೂರಿಯಾಗಿ ಸ್ವಾಗತಿಸಿದೆ. ಕಪ್‌ ಗೆದ್ದು ಬಂದ ಆರ್‌ಸಿಬಿ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಸನ್ಮಾನಿಸಲಿದ್ದಾರೆ..

ಈ ವಿಜಯೋಜತ್ಸವನ್ನ ಸಂಭ್ರಮಿಸಲು ಐಪಿಎಲ್‌ ಚಾಂಪಿಯನ್ಸ್‌ಗಳಿಗೆ ಸನ್ಮಾನ ಕಾರ್ಯಕ್ರಮವನ್ನ ವಿಧಾನಸೌಧ ದಲ್ಲಿ ಆಯೋಜಿಸಲಾಗಿದೆ..ವಿಧಾನ ಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಜನರು ಕಿಕ್ಕಿರಿದು ಸೇರಿದ್ದಾರೆ… ಎಲ್ಲೆಡೆ ಆರ್..ಸಿ.ಬಿ… ಆರ್.ಸಿ.ಬಿ… ಎಂದು ಘೋಷವಾಕ್ಯ‌ ಮೊಳಗಿದೆ..

ಇನ್ನೇನು ಕೆಲವೇ ಕ್ಷಣಗಳಲ್ಲಿ ಆರ್.ಸಿ.ಬಿ ತಂಡದ ಆಟಗಾರರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.. ಅಭಿಮಾನಿಗಳನ್ನ ನಿಯಂತ್ರಿಸಲು ಖಾಕಿ ಹರಸಾಹಸ ಪಡುತ್ತಿದೆ.. ಫ್ಯಾನ್ಸ್‌ಗಳ ಮಧ್ಯೆ ನೂಕು ನುಗ್ಗಲು ಉಂಟಾಗಿದೆ..

.

Share.
Leave A Reply