ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆ ತೆರವು ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಸಾಕಷ್ಟು ವಿವಾದಗಳ ಬಳಿಕ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಸಂತ್ರಸ್ತರಿಗೆ ನಿವೇಶನ ನೀಡುವ ಭರವಸೆ ನೀಡಿದ್ದರು. ಈಗ ಜಮೀರ್ (Zameer Ahmed), ಕರ್ನಾಟಕದವರಿಗೆ ಮಾತ್ರ ನೀಡುತ್ತೇವೆ ಎಂದಿದ್ದಾರೆ.

ಕೋಗಿಲು ಲೇಔಟ್ (Kogilu Layout) ಅಕ್ರಮ ಮನೆ ತೆರವು ವಿಚಾರಕ್ಕೆ ಪಾಕಿಸ್ತಾನ ಎಂಟ್ರಿಗೆ ಸಚಿವ ಜಮೀರ್ ಕಿಡಿಕಾರಿದ್ದಾರೆ. ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ? ಪಾಕಿಸ್ತಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಬಗ್ಗೆ ಹೇಳೋಕೆ ಅರ‍್ಯಾರು? ನಮ್ಮ ದೇಶದಲ್ಲಿ ನಾವು ಇದ್ದೇವೆ. ಮುಸ್ಲಿಮರನ್ನ ನೋಡಿಕೊಳ್ಳೋಕೆ, ಅವರು ಯಾರು ನಮಗೆ ಹೇಳೋಕೆ ಎಂದು ಕಿಡಿಕಾರಿದ್ದಾರೆ.

ಎಲ್ಲಾ ವಿವರ ಕೊಡ್ತೀನಿ. ಡಾಕ್ಯುಮೆಂಟ್ ಪರಿಶೀಲನೆ ಮಾಡಿ ಅಂತ ಸಿಎಂ, ಡಿಸಿಎಂ ಅವರು ಸೂಚನೆ ನೀಡಿದ್ದಾರೆ. ನಮ್ಮ ಕರ್ನಾಟಕದವರು ಇದ್ದರೆ ಮಾತ್ರ ಮನೆ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಆಚೆಯಿಂದ ಬಂದವರಿಗೆ ನಾವು ಮನೆ ಕೊಡೊಲ್ಲ ಎಂದು ಹೇಳಿದ್ದಾರೆ.

ವೇಣುಗೋಪಾಲ್ ಹಸ್ತಕ್ಷೇಪ ಏನೂ ಇಲ್ಲ. ವೇಣುಗೋಪಾಲ್ ಅವರು ಟಿವಿಯಲ್ಲಿ ಹೀಗೆ ಬಂದಿದೆ ನೋಡಿ ಅಂತ ಹೇಳಿದ್ದಾರೆ. ಅಷ್ಟೇ. ದಾಖಲಾತಿ ನೋಡಿ ಯಾರಿಗೂ ಅನ್ಯಾಯವಾಗಬಾರದು. ಸ್ಥಳೀಯರಿಗೆ ಮಾತ್ರ ಮನೆ ಕೊಡಿ ಅಂತ ತೀರ್ಮಾನ ಆಗಿದೆ. ಆಧಾರ್, ರೇಷನ್ ಕಾರ್ಡ್,BPL ಕಾರ್ಡ್ ಇದ್ದವರಿಗೆ ಮಾತ್ರ ಮನೆ ಕೊಡ್ತೀವಿ. ಅದು ಬಿಟ್ಟು ಬೇರೆ ಅವರಿಗೆ ಕೊಡಲು ಸಾಧ್ಯವಿಲ್ಲ. ಅಧಿಕೃತ ದಾಖಲಾತಿ ಇದ್ದರೆ ಮಾತ್ರ ಮನೆಗಳನ್ನು ಕೊಡಲು ಸಾಧ್ಯ. ಬಾಂಗ್ಲಾದೇಶದಿಂದ ಬಂದೋರಿಗೆ ಮನೆ ಕೊಡಲು ಸಾಧ್ಯವಿಲ್ಲ. ನನಗೆ ಇರೋ ಮಾಹಿತಿ ಪ್ರಕಾರ ಬಾಂಗ್ಲಾದೇಶದವರು ಯಾರು ಇಲ್ಲ. 185 ಜನರಲ್ಲಿ 20 ಜನ ಬೇರೆ ಜಿಲ್ಲೆಯವರು ಇದ್ದಾರೆ. ಅವರು ಕರ್ನಾಟಕದವರೇ. ಯಾದಗಿರಿ, ಕಲಬುರಗಿ, ಬೀದರ್ ಅವರೇ. ಜಿಬಿಎ ಅಧಿಕಾರಿಗಳು ಪಟ್ಟಿ ರೆಡಿ ಮಾಡೋಕೆ ಸಿಎಂ, ಡಿಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Share.
Leave A Reply