ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ಕಾಂತಾರ ಪ್ರೀಕ್ವೆಲ್ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯ್ತಿರೋ ಅಭಿಮಾನಿಗಳಿಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಈಗಾಗ್ಲೇ ಅಕ್ಟೋಬರ್ 2ಕ್ಕೆ ಕಾಂತಾರ 1 ರಿಲೀಸ್ ಆಗುತ್ತಿದೆ. ಇದ ನಡುವೆ ಇದೇ ಸೆಪ್ಟೆಂಬರ್ 20ಕ್ಕೆ ಕಾಂತಾರ ಟ್ರೇಲರ್ ಆಗಲಿದೆ ಅಂತಾ ಹೇಳ್ತಿದ್ದು, ಅಭಿಮಾನಿಗಳ ಖುಷಿ ದುಪ್ಪಟ್ಟಾಗಿಸಿದೆ. ಹೌದು.. ಕಾಂತಾರ: ಚಾಪ್ಟರ್ 1 ಸಿನಿಮಾದ ಟ್ರೇಲರ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಸೆಪ್ಟೆಂಬರ್ 20ರಂದು ಕಾಂತಾರ 1 ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಅಂತಾ ಹೇಳಲಾಗ್ತಿದೆ. ಇನ್ನು, ರಿಷಬ್ ಶೆಟ್ಟಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ಗೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸಿದೆ. ರಿಷಬ್ ಶೆಟ್ಟಿ ಅವರು ವೃತ್ತಿ ಜೀವನದಲ್ಲಿ ಭಿನ್ನ ಸಿನಿಮಾಗಳನ್ನೇ ಮಾಡುತ್ತಾ ಬರುತ್ತಿದ್ದಾರೆ. ಮೊದಲ ಬಾರಿಗೆ ಪ್ರೀಕ್ವೆಲ್ ಮಾಡೋ ಸಾಹಸಕ್ಕೆ ಮುಂದಾಗಿದ್ದು, ಕಾಂತಾರ ಮೊದಲ ಭಾಗದ ಹಿಂದಿನ ಕಥೆ ಈ ಸಿನಿಮಾದಲ್ಲಿ ಇರಲಿದೆ. ಸದ್ಯ ಸೆಪ್ಟೆಂಬರ್ 20ಕ್ಕೆ ಬಿಡುಗಡೆ ಆಗಲಿರುವ ಟ್ರೇಲರ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
Read Also : ಸಾಹಸ ಸಿಂಹ ವಿಷ್ಣುವರ್ಧನ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ!