ಕರ್ನಾಟಕ ಸರ್ಕಾರದ ಒಡೆತನದಲ್ಲಿರುವ Mysore Sandal Soap ಹೊಸ ರಾಯಭಾರಿಯನ್ನ ನೇಮಕ ಮಾಡಲಾಗಿದೆ. ಮೈಸೂರು ಸ್ಯಾಂಡಲ್ ಮತ್ತು ಇತರ ಉತ್ಪನ್ನಗಳಿಗೆ 2 ವರ್ಷಗಳ ಅವಧಿಗೆ ಮಿಲ್ಕಿ ಬ್ಯೂಟಿ ತಮನ್ನಾ ಅವರನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಈ ಕುರಿತು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯಲ್ಲಿ ಉಲ್ಲೇಖಸಿರುವಂತೆ ಈ ಎರಡು ವರ್ಷಗಳ ಅವಧಿಗೆ ತಮನ್ನ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 6.2 ಕೋಟಿ ರೂಪಾಯಿ. ಆದ್ರೆ, ತಮನ್ನ ಆಯ್ಕೆ ಬಗ್ಗೆ ಹಾಗೂ ಆಕೆಗೆ ನೀಡ್ತಿರುವ ಸಂಭಾವನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗ್ತಿವೆ. ತಮನ್ನಾ ಬದಲು ಕನ್ನಡದವರನ್ನೇ ಆಯ್ಕೆ ಮಾಡ್ಬೋದಿತ್ತಲ್ವಾ? ಇಷ್ಟೊಂದು ದೊಡ್ಡ ಮೊತ್ತ ನೀಡಿ ನೇಮಕ ಮಾಡಿಕೊಳ್ಳುವ ಅಗತ್ಯವಿತ್ತಾ? ಅಂತಾ ಪ್ರಶ್ನೆ ಮಾಡಲಾಗುತ್ತಿದೆ.
ಇನ್ನು ಈ ಹಿಂದೆ ಕ್ರಿಕೆಟಿಗ ಎಂಎಸ್ ಧೋನಿ Mysore Sandal Soap ಮೊದಲ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದರು. ಆದ್ರೆ, ಬ್ರ್ಯಾಂಡ್ ಪ್ರಮೋಷನ್‌ಗೆ ಧೋನಿ ಸಮಯ ನೀಡಲು ಅಸಮರ್ಥರಾಗಿದ್ರಿಂದ ಆ ಒಪ್ಪಂದವನ್ನ ಡಿಸೆಂಬರ್ 2007ರಲ್ಲಿ ಕೆಎಸ್‌ಡಿಎಲ್ ರದ್ದುಗೊಳಿಸಿತ್ತು. ಅಷ್ಟೇ ಅಲ್ಲದೆ ಪರಿಹಾರವನ್ನು ಕೋರಿತ್ತು.
Also Read: Madenur Manu Arrest: ಮಡೆನೂರು ಮನು ಕೈಗೆ ಕೋಳ ತೊಡಿಸಿದ ಪೊಲೀಸರು : ಮನು ಎಲ್ಲಿದ್ದ ಗೊತ್ತಾ..?
ಆದ್ರೆ, 2012 ರಲ್ಲಿ ಧೋನಿ ಪ್ರಕರಣವನ್ನು ಗೆಲ್ಲುವುದರ ಮೂಲಕ ಈ ವಿವಾದಕ್ಕೆ ಫುಲ್‌ಸ್ಟಾಪ್ ಬಿತ್ತು. ಇದೀಗ ತಮನ್ನಾ ಭಾಟಿಯಾ ಈ ಜವಾಬ್ದಾರಿಯನ್ನ ಹೊತ್ತುಕೊಳ್ಳಲು ಸಿದ್ಧರಾಗಿದ್ದಾರೆ. ತಮನ್ನಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋದ್ರಿಂದ ತಮ್ಮ ಬ್ರ್ಯಾಂಡ್‌ಗೆ ಒಳ್ಳೆ ಪ್ರಚಾರ ಸಿಗುತ್ತೆ ಅನ್ನೋದು ಸರ್ಕಾರದ ಲೆಕ್ಕಾಚಾರವಾಗಿರಬಹುದು..
