ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಅದ್ಯಾಕೋ ಶಮನವಾಗೋ ಹಾಗೆ ಕಾಣಿಸ್ತಿಲ್ಲ.. ಶಾಸಕ ಯತ್ನಾಳ್ ಉಚ್ಚಾಟನೆಗೊಂಡ್ರೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮಾತ್ರ ನೆಮ್ಮದಿಯೇ ಇಲ್ಲದಂತಾಗಿದೆ.. ಬಿಜೆಪಿ ಭಿನ್ನಮತೀಯರ ಹೋರಾಟದ ಬಿಸಿಗೆ ಅವರ ಪಟ್ಟದ ಬುಡವನ್ನ ಅಲುಗಾಡಿಸುತ್ತಲೇ ಇದೆ..
ಅಷ್ಟೇ ಅಲ್ಲದೇ ಬಂಡಾಯ ಎದ್ದ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಅಸ್ತಿತ್ವವನ್ನೇ ಪ್ರಶ್ನೆ ಮಾಡ್ತಿದ್ದಾರೆ.. ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ಅವರ ಜನ್ಮದಿನದ ನೆಪದಲ್ಲಿ ಒಗ್ಗಟ್ಟು ಪ್ರದರ್ಶಿಸಿರುವ ರೆಬೆಲ್ ಮಿತ್ರ ಮಂಡಳಿ ಸದಸ್ಯರು ದೊಡ್ಡ ಗೇಮ್ ಪ್ಲ್ಯಾನ್ ರಚಿಸಿದ್ದಾರೆ..
ಇದು ಬರ್ತ್ಡೇ ಅಲ್ಲ.. ರೆಬೆಲ್ ಲೀಡರ್ಸ್ ಮಹಾ ಮಸಲತ್ತು!
ದಾವಣಗೆರೆಯಲ್ಲಿ ಜಿ.ಎಂ. ಸಿದ್ದೇಶ್ವರವರ 74ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಜೆಪಿಯ ಭಿನ್ನಮತೀಯರು ಭಾಗಿಯಾಗಿದ್ರು.. ಕುಮಾರ್ ಬಂಗಾರಪ್ಪ, ಬಿ.ಪಿ ಹರೀಶ್, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ರೆಬೆಲ್ಸ್ ಗೌಪ್ಯ ಸಭೆ ನಡೆಸಿ ಬಿಎಸ್ವೈ ಕುಟುಂಬದ ಪಾರುಪತ್ಯಕ್ಕೆ ಅಂತ್ಯ ಹಾಡಲು ಸೀಕ್ರೆಟ್ ಮೀಟಿಂಗ್ ಮಾಡಿದ್ರು.. ಈಗಾಗಲೇ ಯತ್ನಾಳ್ ಉಚ್ಚಾಟನೆ ಗೊಂಡು ಭಿನ್ನ ಬಣದ ನಾಯಕರಿಗೆ ದೊಡ್ಡ ಸೋಲಾಗಿದೆ.. ಈಗ ಮತ್ತೆ ಅದೇ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಿದ್ರೆ ತಮಗೆ ಉಳಿಗಾಲವಿರೋದಿಲ್ಲ ಅಂತ ಆ ನಾಯಕರು ಸದ್ದು ಮಾಡಿದ್ದಾರೆ.. ಜೊತೆಗೆ ರಾಜ್ಯ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಬಿಎಸ್ವೈ ವಿರುದ್ಧ ಹರಿಹಾಯ್ದಿದ್ದಾರೆ.
ಕದಡಿದ ಕಮಲ..? ಬರ್ತ್ಡೇ ನೆಪ
ಬರ್ತ್ ಡೇ ಪಾರ್ಟಿ ನೆಪದಲ್ಲಿ ಒಟ್ಟಿಗೆ ಸೇರಿ ರೊಚ್ಚಿಗೆದ್ದಿರುವ ಅರವಿಂದ ಲಿಂಬಾವಳಿ, ಯಡಿಯೂರಪ್ಪನವ್ರು ಕಾಂಗ್ರೆಸ್, ಜೆಡಿಎಸ್ ನಾಯಕರ ಮನೆ ಬಾಗಿಲು ಬಡಿದಿದ್ರು. ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟಿದ್ರು. ಮತ್ತೆ ಬಿಜೆಪಿ ಪಕ್ಷಕ್ಕೆ ಯಾಕೆ ಮರಳಿದ್ದಾರೋ ಅಂತ ವಾಗ್ಬಾಣ ಬಿಟ್ಟಿದ್ದಾರೆ.. ಅಲ್ಲದೇ, ಈ ಹಿಂದೆ ಬಿಎಸ್ವೈ ಸಿಎಂ, ಡಿಸಿಎಂ ಹುದ್ದೆಗೇರಲು ಸಿದ್ದೇಶ್ವರವರ ಪರಿಶ್ರಮವಿದೆ.
ಪಕ್ಷದಲ್ಲಿ ಸಮಸ್ಯೆ ಸೃಷ್ಟಿಸುವವರನ್ನು ಮಟ್ಟಹಾಕಬೇಕಿದೆ ಅಂತ ಲಿಂಬಾವಳಿ ಪರೋಕ್ಷವಾಗಿ ಬಿಎಸ್ವೈಗೆ ಟಾಂಗ್ ಕೊಟ್ಟಿದ್ದಾರೆ.. ಇತ್ತ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕೂಡ ಕಿಡಿಕಾರಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಬೆನ್ನಿಗೆ ಚೂರಿ ಹಾಕಿದವರನ್ನು ಸುಮ್ಮನೇ ಬಿಡಬಾರದು ಅಂತ ಬಹಿರಂಗ ಸಮರ ಸಾರಿದ್ದಾರೆ.
ರೆಬೆಲ್ಸ್ FIRE
ನಾವು ಎಷ್ಟೇ ವಿರೋಧಿಸಿದ್ರೂ ಹೈಕಮಾಂಡ್ ಮಾತ್ರ ವಿಜಯೇಂದ್ರರನ್ನು ಕೆಳಗೆ ಇಳಿಸುತ್ತಿಲ್ಲ. ಬದಲಾಗಿ ತಮ್ಮದೇ ತಂಡದವರನ್ನು ಉಚ್ಚಾಟನೆ ಮಾಡಲಾಗಿದೆ. ಇದು ಹೀಗೆ ಮುಂದುವರೆದರೆ ರಾಜ್ಯ ಬಿಜೆಪಿಯಲ್ಲಿ ಏಕಚಕ್ರಾಧಿಪತ್ಯ ಮುಂದುವರೆಯಲಿದೆ.. ಹೀಗಾಗಿ ಅದನ್ನ ಮಟ್ಟ ಹಾಕಲೇಬೇಕು.
ವರಿಷ್ಠರ ಮನವೊಲಿಸಲು ಈ ಬಾರಿ ವಿಭನ್ನ ತಂತ್ರ ರೂಪಿಸಲೇ ಬೇಕು ಅಂತ ಬಿಜೆಪಿ ರೆಬೆಲ್ಸ್ ಸುದೀರ್ಘ ಚರ್ಚೆ ನಡೆಸಿದ್ದಾರೆ ಅಂತ ಹೇಳಲಾಗಿದೆ.. ಸದ್ಯ ಎಲ್ಲರ ಗಮನ ಹೈಕಮಾಂಡ್ ನಿರ್ಧಾರದ ಮೇಲಿದ್ದು, ಏನಾಗುತ್ತೋ ಅಂತಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
