ಇಂದು ಆರ್‌ಸಿಬಿ ಹಾಗೂ ಪಂಜಾಬ್ (RCB Vs PBKS) ಫೈನಲ್ ಪಂದ್ಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಿದೆ. ಬೆಂಗಳೂರಿನ  ಹಲವು ಕಡೆ ಮ್ಯಾಚ್ ಸ್ಕ್ರೀನಿಂಗ್ ಆಯೋಜಿಸಲಾಗಿದೆ. ಇದರ ಜೊತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.

ಪಂದ್ಯಾವಳಿ ನಂತರ ಕಾನೂನು ಉಲ್ಲಂಘನೆ ಆಗಬಾರದು, ಸಂಭ್ರಮಾಚರಣೆ ಕಾನೂನು ಚೌಕಟ್ಟಿನಲ್ಲಿ ಇರಬೇಕು ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಎಚ್ಚರಿಸಿದ್ದಾರೆ. ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಬೆಟ್ಟಿಂಗ್ ಬಗ್ಗೆ ಹದ್ದಿನ ಕಣ್ಣು ಇಟ್ಟಿದ್ದೇವೆ ಅಂತ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್‌ ಅವರು ತಿಳಿಸಿದ್ದಾರೆ..

ಇದಷ್ಟೇ ಅಲ್ಲದೇ ಈಗ ನಡೆಯುತ್ತಿರುವ ರ್‌ಸಿಬಿ ವರ್ಸಸ್ ಪಂಜಾಬ್ ಮ್ಯಾಚ್‌ ವೀಕ್ಷಣೆಗೆ 30 ಸಾವಿರಕ್ಕೂ ಅಧಿಕ ಜನರು ಕುಳಿತು ನೋಡಬಹುದಾದ ವ್ಯವಸ್ಥೆಯನ್ನ ಬೆಂಗಳೂರಲ್ಲಿ ಮಾಡಲಾಗಿದೆ.. ಬೆಂಗಳೂರಲ್ಲಿ ಅತಿ ದೊಡ್ಡ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದ ಬಿಜಿಸ್ ಮೈದಾನದಲ್ಲಿ ಎಲ್ಇಡಿ ಸ್ಕ್ರೀನಿಂಗ್‌ ಅಳವಡಿಸಲಾಗಿದೆ.. ಈಗಾಗಲೇ ಮ್ಯಾಚ್‌ ಶುರುವಾಗಿದ್ದು, ಮೈದಾನದಲ್ಲಿ ಕೌತುಕದಿಂದ ಫ್ಯಾನ್ಸ್‌ ಪಂದ್ಯ ವೀಕ್ಷಿಸುತ್ತಿದ್ದಾರೆ..

Share.
Leave A Reply