ಜೂನ್‌ 3ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 18ನೇ ಆವೃತ್ತಿಯ ಐಪಿಎಲ್‌ ಸೀಸನ್‌ ಗೆದ್ದಿತ್ತು. ಆದ್ರೆ ಕಪ್‌ ಗೆಲ್ತಿದ್ದಂತೆ ಅದನ್ನ ಸಂಭ್ರಮಿಸೋಕು ಆಗದ ಸ್ಥಿತಿಯಲ್ಲಿ ಆರ್‌ಸಿಬಿ ಹಾಗೂ ಅಭಿಮಾನಿಗಳು ಮುಳುಗಿದ್ರು.. ಯಾಕಂದ್ರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಲೆಬ್ರೇಟ್‌ ಮಾಡುವಾಗ ಕಾಲ್ತುಳಿತ ಉಂಟಾಗಿ 11 ಜನರು ದಾರುಣ ಅಂತ್ಯ ಕಂಡಿದ್ರು.. ಅವರದ್ದು ತಪ್ಪು.. ಇವರದ್ದು ತಪ್ಪು ಅಂತ ಆರೋಪ ಹೊರಿಸಿವ ಹುನ್ನಾರವೂ ಶೂರುವಾಗಿತ್ತು.. ಅದರಂತೆ ಈಗ ರಾಜ್ಯ ಸರ್ಕಾರ ದುರಂತಕ್ಕೆ ಆರ್‌ಸಿಬಿಯನ್ನ ಹೊಣೆಯಾಗಿಸಿ ಜಾರಿಕೊಂಡಿದೆ.. ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಸ್ಫೋಟಕ ಅಂಶಗಳು ಬಯಲಾಗಿವೆ..

ಆರ್‌ಸಿಬಿ ಪೊಲೀಸರಿಂದ ಸಮಾಲೋಚನೆ, ಅನುಮತಿ ಇಲ್ಲದೇ ಏಕಪಕ್ಷೀಯವಾಗಿ ಸಂಭ್ರಮಾಚರಣೆಗೆ ನಿರ್ಧಾರ ತೆಗೆದುಕೊಂಡಿದ್ದೇ ಘಟನೆಗೆ ಕಾರಣ ಅಂತ ರಾಜ್ಯ ಸರ್ಕಾರ ವರದಿಯಲ್ಲಿ ಉಲ್ಲೇಖಿಸಿದೆ. ಅವರು ಮುಂಚೆಯೇ ಸರ್ಕಾರದಿಂದ ಅನುಮತಿ ಪಡೆದಿರಲಿಲ್ಲ.. ಹೀಗಾಗಿ ಇಲಾಖೆಗಳಿಂದ ಪ್ಲಾನ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.. ಅರ್ಜೆಂಟ್ ಆಗಿ ಅನುಮತಿ ಕೇಳಿದ್ದರಿಂದ ಬಂದೋಬಸ್ತ್, ಪ್ರಥಮ ಚಿಕಿತ್ಸೆ ವ್ಯವಸ್ಥೆ, ಎಸ್‌ಓಪಿ ವ್ಯವಸ್ಥೆ ಪ್ಲಾನ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಅಂತ ಉಲ್ಲೇಖಿಸಿ RCB, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಡಿಎನ್‌ಎ ಲೋಪಗಳನ್ನು ಎತ್ತಿ ತೋರಿಸಿದೆ..

ವಿಕ್ಟರಿ ಪೆರೇಡ್‌ನಲ್ಲಿ ಭಾಗವಹಿಸಲು ಎಲ್ಲರಿಗೂ ಫ್ರೀ ಎಂಟ್ರಿ ಅಂತ ಆರ್‌ಸಿಬಿ ಜೂನ್‌ 4ರಂದು ಬೆಳಗ್ಗೆ 7.01 ಗಂಟೆಗೆ ಪೋಸ್ಟ್‌ ಮಾಡಿತ್ತು.. ಆದ್ರೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.. ಬಳಿಕ 8 ಗಂಟೆಗೆ ಪೋಸ್ಟ್‌ ಮಾಡಿದ್ದ ಆರ್‌ಸಿಬಿ ಆಟಗಾರನ ವಿಡಿಯೋ ಕೂಡ ಫುಲ್‌ ವೈರಲ್‌ ಆಗಿತ್ತು.. ಇದ್ರಿಂದಲೇ ತುಂಬಾ ಜನರು ಸೇರಿದ್ರು. ಬಳಿಕ ಮಧ್ಯಾಹ್ನ 3:14ಕ್ಕೆ ಆರ್‌ಸಿಬಿಯ ವಿಕ್ಟರಿ ಪರೇಡ್‌ ಹಾಗೂ ಪಾಸ್‌ಗಳ ಬಗ್ಗೆ ಪೋಸ್ಟ್‌ ಮಾಡಿತ್ತು. ಹೀಗೆ ಆರ್‌ಸಿಬಿ ಮಾಡಿದ್ದ ಪೋಸ್ಟ್‌ಗಳನ್ನು 44 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಹೀಗಾಗಿ ಸಂಭ್ರಮಾಚರಣೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಅಂತ ಉಲ್ಲೇಖಿಸುವ ಮೂಲಕ ಆರ್‌ಸಿಬಿ ಮ್ಯಾನೆಜ್‌ಮೆಂಟ್‌ ದುರಂತಕ್ಕೆ ಕಾರಣ ಅಂತ ಸರ್ಕಾರ ಹೊಣೆ ಹೊರಿಸಿದೆ.

Share.
Leave A Reply