RCB ತಂಡ 9 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದಿದೆ. ಆರ್‌ಸಿಬಿ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಸಂಘಟಿತ ಆಟವನ್ನು ಆಡಿ ಗಮನ ಸೆಳೆಯಿತು. ದಾಖಲೆಗಳ ಮೇಲೆ ದಾಖಲೆ ಬರೆಯುವ ಆರ್ಸಿಬಿ ಈಗ ಪ್ಲೇಯರ್‌ ಆಫ್‌ ಮ್ಯಾಚ್‌ ಪ್ರಶಸ್ತಿಯಲ್ಲೂ ರೆಕಾರ್ಡ್‌ ಮಾಡಿದೆ.

ಪ್ರತಿ ಪಂದ್ಯದಲ್ಲೂ ಆರ್‌ಸಿಬಿ ತಂಡದ ಪರ ಒಬ್ಬ ಒಬ್ಬ ಮ್ಯಾಚ್‌ ವಿನ್ನರ್‌ಗಳು ಮೂಡಿ ಬಂದಿದ್ದಾರೆ. RCB ಈ ಲೀಗ್‌ನಲ್ಲಿ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, 9 ವಿಭಿನ್ನ ಪ್ಲೇಯರ್ ಆಫ್‌ ದಿ ಮ್ಯಾಚ್‌ ಪಡೆದಿದ್ದಾರೆ. ಪಂಜಾಬ್‌ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಆರ್‌ಸಿಬಿ, ಆ ಪಂದ್ಯದಲ್ಲಿ ಮತ್ತೊಬ್ಬ ಆಟಗಾರ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನ ಪಡೆದಿದ್ದಾರೆ.

ಕೆಕೆಆರ್‌ ಮತ್ತು ಡೆಲ್ಲಿ ತಂಡಗಳ ವಿರುದ್ಧ ಅದ್ಭುತ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೃನಾಲ್‌ ಪಾಂಡ್ಯ ಎರಡು ಬಾರಿ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನ ಪಡೆದಿದ್ದಾರೆ. ಇನ್ನು ಸಿಎಸ್‌ಕೆ ಮತ್ತು ಮುಂಬೈ ವಿರುದ್ಧ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ರಜತ್‌ ಪಟಿದಾರ್‌ ಕೂಡ ಎರಡು ಬಾರಿ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನ ಪಡೆದಿದ್ದಾರೆ.

ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ ಮನ್‌ ಫಿಲ್‌ ಸಾಲ್ಟ್‌ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಪಂಜಾಬ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಟಿಮ್‌ ಡೇವಿಡ್‌ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನ ಪಡೆದಿದ್ದಾರೆ. ಅದೇ ರೀತಿ ಪಂಜಾಬ್‌ ವಿರುದ್ಧ ಮತ್ತೊಂದು ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆ ಪ್ರಶಸ್ತಿಗೆ ಭಾಜನರಾಗಿದ್ರು. ರಾಜಸ್ಥಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಜೋಶ್‌ ಹೆಜಲ್‌ವುಡ್‌ ಕೂಡ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನ ಪಡೆದಿದ್ದಾರೆ.

Also Read: ಯುವ ಆಟಗಾರನಿಗೆ Kohli ಅವಮಾನ? ಕಿಂಗ್‌ ವಿರುದ್ಧ ಸಿಡಿದೆದ್ದ ನೆಟಿಜೆನ್ಸ್!‌

ಸಿಎಸ್‌ಕೆ ವಿರುದ್ಧದ ಮ್ಯಾಚ್‌ ನಲ್ಲಿ ರೊಮಾರಿಯೋ ಶೆಫರ್ಡ್‌, ಲಖ್ನೋ ವಿರುದ್ಧ ಜಿತೇಶ್‌ ಶರ್ಮಾ, ಪಂಜಾಬ್‌ ವಿರುದ್ಧ ಸುಯಾಶ್‌ ಶರ್ಮಾ ಪ್ಲೇಯರ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನ ಪಡೆದಿದ್ದಾರೆ. ಈ ಪ್ರಶಸ್ತಿಯಲ್ಲೂ ಕೂಡ ಆರ್‌ಸಿಬಿ ದಾಖಲೆ ಬರೆದಿದೆ.

Share.
Leave A Reply