ಐಪಿಎಲ್‌ ಸೀಸನ್‌ 18ರಲ್ಲಿ ಆರ್‌ಸಿಬಿ ಫೈನಲ್‌ಗೇರಿದ ಬೆನ್ನಲ್ಲೇ ಕಿಂಗ್‌ Kohli ವಿರುದ್ಧ ಸೋಷಿಯಲ್‌ ಮೀಡಿಯಾ ದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.. ಪಂಜಾಬ್‌ ಆಟಗಾರ ಮುಶೀರ್‌ ಖಾನ್‌ಗೆ ನೀರು ತರುವವನು ಅಂತಾ ಹೇಳುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಕೊಹ್ಲಿ ಗುರಿಯಾಗಿದ್ದಾರೆ..

ಆರ್‌ಸಿಬಿ ಮತ್ತು ಪಿಬಿಕೆಎಸ್‌ ನಡುವಿನ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಸಬ್ ಆಗಿ ಮುಶೀರ್ ಖಾನ್ ಕಣಕ್ಕಿಳಿದಿದ್ದರು. ವಿಶೇಷ ಎಂದರೆ ಇದು ಮುಶೀರ್ ಅವರ ಚೊಚ್ಚಲ ಐಪಿಎಲ್​ ಪಂದ್ಯವಾಗಿತ್ತು. ಇತ್ತ ಮೊದಲ ಪಂದ್ಯವಾಡಲು ಕ್ರೀಸ್​ಗೆ ಆಗಮಿಸಿದ ಯುವ ಆಟಗಾರನನ್ನು ವಿರಾಟ್ Kohli ಅಪಹಾಸ್ಯ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿರಾಟ್ ಕೊಹ್ಲಿ ‘ಪಾನಿ ಪಿಲಾತಾ ಹೈ ಅಂದ್ರೆ ನೀರು ತರುವವನು ಎಂಬರ್ಥ ಬರುವಂತಹ ಸನ್ನೆ ಮಾಡಿದರು. ಕೊಹ್ಲಿ ತಮ್ಮ ಕೈಗಳಿಂದ ನೀರು ಕುಡಿಸುವ ರೀತಿಯಲ್ಲಿ ಸನ್ನೆ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ..

ಮುಶೀರ್ ಖಾನ್ ಕಳೆದ 14 ಪಂದ್ಯಗಳಲ್ಲಿ ಇಂಪ್ಯಾಕ್ಟ್ ಸಬ್ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್​ನ ಆಟಗಾರರಿಗೆ ನೀರು ತಂದುಕೊಡುತ್ತಿದ್ದರು. ಇದನ್ನೇ ಪ್ರಸ್ತಾಪಿಸಿ ವಿರಾಟ್ ಕೊಹ್ಲಿ, ಮುಶೀರ್ ಅವರನ್ನು ಹೀಯಾಳಿಸಿದ್ದಾರೆ.. ವಿರಾಟ್ ಕೊಹ್ಲಿಯ ಈ ವರ್ತನೆಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಕ್ರಿಕೆಟ್ ಅಂಗಳದ ಕಿಂಗ್ ಎನಿಸಿಕೊಂಡವನಿಂದ ಮೂಡಿಬಂದ ಈ ವರ್ತನೆ ನಿಜಕ್ಕೂ ಅಸಹ್ಯ ಅಂತಾ ಅನೇಕರು ಹೇಳಿದರೆ, ಇನ್ನೂ ಕೆಲವರು ಎಲ್ಲರೂ ಬಾಲ್ ಬಾಯ್, ವಾಟರ್ ಬಾಯ್​ ಆಗಿಯೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ..

Also Read: 9 ವರ್ಷಗಳ ಬಳಿಕ ಫೈನಲ್‌ಗೆ ಎಂಟ್ರಿ.. ಕಪ್‌ ಗೆಲ್ಲೋಕೆ ಒಂದೇ ಹೆಜ್ಜೆ!

ಮತ್ತೊಂದಿಷ್ಟು ಮಂದಿ, ರಣಜಿಯಲ್ಲಿ ತಮ್ಮನ್ನು ಔಟ್ ಮಾಡಿದ ಯುವ ಆಟಗಾರನಿಗೆ, ವಿರಾಟ್ ಕೊಹ್ಲಿ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ನೀನು ನನ್ನನ್ನು ಔಟ್ ಮಾಡಿರಬಹುದು, ಆದರೆ ಈಗ ನೀನು ಕೇವಲ ಡ್ರಿಂಕ್ಸ್ ತರುವ ಹುಡುಗ ಎಂಬ ರೀತಿಯಲ್ಲಿ ಕೊಹ್ಲಿ ಸಂದೇಶ ರವಾನಿಸಿದ್ದಾರೆ ಅಂತಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ..

Share.
Leave A Reply