ಭಾರತ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್ ಘೋಷಿಸಿದ್ದಕ್ಕೆ ಸಚಿವ Priyank Kharge ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಕದನ ವಿರಾಮ ವಿಚಾರವಾಗಿ ಮಾತನಾಡಿ, ಮುಂಚೆಯಿಂದ ನಮ್ಮ ನಿಲುವು ಸ್ಪಷ್ಟವಾಗಿದೆ. ಎಲ್ಲ ವಿರೋಧ ಪಕ್ಷಗಳು ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಆದ್ರೆ ನಮ್ಮ ವಿದೇಶಾಂಗ ನೀತಿ ಬಗ್ಗೆ ಟ್ರಂಪ್ ಯಾಕೆ ಘೋಷಣೆ ಮಾಡ್ತಾರೆ..? ನಿನ್ನೆ ಕೂಡ ಮಾತನಾಡಿದ್ದಾರೆ.. ಯುದ್ಧ ಬೇಡ ವ್ಯಾಪಾರ ಮಾಡಿ, ವ್ಯಾಪಾರ ನಾನು ಕೋಡುತ್ತೇನೆ ಅಂದಿದ್ದಾರೆ.

ಕಾಶ್ಮೀರ ನಮ್ಮ ಆಂತರಿಕ ವಿಚಾರ, ಇದು ಅಂತರಾಷ್ಟ್ರೀಯ ವಿಚಾರ ಯಾಕೆ ಆಗಿದೆ. ನಮ್ಮ ವಿದೇಶಾಂಗ ಔಟ್ ಸೋರ್ಸ್ ಕೊಟ್ಟಿದ್ದೇವೆ ಎಂದು ಹೇಳಲಿ ನಾವು ಸುಮ್ಮನಾಗಿ ಬೀಡುತ್ತೇವೆ. ನಮ್ಮ ವಿದೇಶಾಂಗ ತೀರ್ಮಾನ ಯಾರು ಮಾಡಬೇಕು. ನಮ್ಮ ಪ್ರಧಾನಿ ಮಾಡಬೇಕು.. ಸರ್ವಪಕ್ಷ ಸಭೆಗೆ ಮೋದಿ ಬರಲಿಲ್ಲ..ಆದ್ರೆ ಆರ್.ಎಸ್.ಎಸ್‌ಗೆ ವಿವರಣೆ ಕೊಡ್ತಾರೆ.. ನಾವು ಸರಳ ಪ್ರಶ್ನೆ ಮಾಡಿದ್ದೇವೆ.. ಕದನ ವಿರಾಮದ ಕಂಡಿಷನ್ ಏನು? ಎಂದು ಕೇಳಿದ್ದೇವೆ. ಪೆಹಲ್ಗಾಮ್ ಅಟ್ಯಾಕ್‌ ಮಾಡಿದ್ದ ಉಗ್ರರು ಎಲ್ಲಿದ್ದಾರೆ..? ಉಗ್ರರು ಎಲ್ಲಿ ಹೋದ್ರು..? ಎಂದು ಪ್ರಧಾನಿ ಮೋದಿಯಿಂದ ಉತ್ತರ ಬೇಕು.

Also Read: ಮೆಟ್ರೋಪಾಲಿಟನ್ ಸಿಟಿಗಳಲ್ಲಿ Bengaluru ಸೇಫ್ ; ಸಚಿವ ಜಿ.ಪರಮೇಶ್ವರ್‌ರಿಂದ ಮಾಹಿತಿ


ಇನ್ನು ಟ್ರಂಪ್ ಹೋಗಿ ಅಪ್ಪಿಕೊಂಡಿದ್ದೆ ಆಯ್ತು ಒಳ್ಳೆಯ ಸ್ನೇಹಿತರು ಯಾರು ಮೋಸ ಮಾಡಲ್ಲ. ಆ್ಯಪಲ್ ತಯಾರಿಕಾ ಘಟಕ ಬೆಂಗಳೂರಿಗೆ ತಂದಿದ್ದು ನಾವು, ಇವತ್ತು ಮೇಕಿನ್ ಇಂಡಿಯಾ ಬೇಡ ಅಂತ ಟ್ರಂಪ್ ಹೇಳ್ತಾರೆ. ನೀವು ಮಾಡುವ ನಿರ್ಧಾರವನ್ನು ಜನರಿಗೆ ತಿಳಿಸಬೇಕು. ಅಮೆರಿಕ ವಸ್ತುಗಳಿಗೆ ೦% ತೆರಿಗೆಗೆ ಬಂದಿದ್ದೆ, ಇದು ಅನುಮಾನ ಮೂಡಿಸುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಉತ್ತರ ನೀಡಬೇಕು.

ಭಯೋತ್ಪಾದನೆ ಕಿತ್ತು ಹಾಕಬೇಕಾದ್ರೆ ಬೇರು ಸಮೇತ ಕೀಳಬೇಕು ಕದನ ವಿರಾಮ ಯಾಕೆ ‌ನಿಲ್ಲಿಸಿದ್ರು. ಇದರ ಮಾಹಿತಿ ಕೇಂದ್ರ ಸರ್ಕಾರ ನೀಡಬೇಕು.. IMF ಸಾಲ ಯಾಕೆ ಕೊಟ್ರು ಇದನ್ನು ತಡೆಯಲು ಭಾರತಕ್ಕೆ ಆಗಲಿಲ್ಲ. ಪಾಕಿಸ್ತಾನ ಜೊತೆ ಟರ್ಕಿ, ಚೈನಾ ಬಂತು. ಆದ್ರೆ ಭಾರತದ ಜೊತೆಗೆ ಯಾರಾದರೂ ನಿಂತ್ರಾ.. ಈಗ ಬಾಯ್ಕಾಟ್ ಟರ್ಕಿ‌ ಮಾಡುತ್ತಿದ್ದಾರೆ. 300 ಮಿಸೈಲ್ ಅಮೆರಿಕಾದಿಂದ ಪಾಕಿಸ್ತಾನಕ್ಕೆ ಕೊಟ್ಟಿದ್ದಾರೆ. ಬಾಯ್ಕಾಟ್ ಅಮೆರಿಕ ಮಾಡಲು ಇವರಿಗೆ ಆಗುತ್ತಾ. ನಿನ್ನೆ ಚೈನಾ ವಿರುದ್ಧ ಯುದ್ಧ ಮಾಡಲು ಆಗಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.. ನಾವು ಕೇಳುವ ಪ್ರಶ್ನೆಗೆ ಉತ್ತರ ನೀಡಲು ಬಿಜೆಪಿಗೆ ಆಗುತ್ತಿಲ್ಲ.ಅದಕ್ಕೆ ಮೆಂಟಲ್ ಆಸ್ಪತ್ರೆಗೆ ಹಾಕಬೇಕು ಅಂತಾರೆ. ಮೊದಲು ನಾವು ಕೇಳಿದ ಪ್ರಶ್ನೆಗೆ ಉತ್ತರ ನೀಡಲಿ, ಡಿಬೇಟ್ ಮಾಡಲು ಬರಲಿ ನಾವು ತಯಾರಿದ್ದೇವೆ ಎಂದು ಬಿಜೆಪಿಗೆ ಸವಾಲ್‌ ಹಾಕಿದರು.

ಇವತ್ತು ಬಿಜೆಪಿ ತಿರಂಗಾ ಯಾತ್ರೆ ಮಾಡ್ತಾ ಇದ್ದಾರೆ, ಬಿಜೆಪಿಗರಿಗೆ ತಿರಂಗಾ ಯಾತ್ರೆ ಮಾಡುವ ನೈತಿಕತೆ ಇಲ್ಲ. ವಿದೇಶಾಂಗ ನೀತಿಯ ಲೋಪ‌ಮುಚ್ಚಲು ತಿರಂಗಾ ಯಾತ್ರೆ ಮಾಡ್ತಿದ್ದಾರೆ.

ಇನ್ನು ಬಿಹಾರದಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಮೇಲೆ 20 ಕೇಸ್ ಹಾಕಿದ್ದಾರೆ. ಜನರ ಮಧ್ಯೆ ಭಾರತ್ ಜೋಡೋ ಯಾತ್ರೆ ಮಾಡಿದ್ರು. ಬಿಜೆಪಿಯವ್ರು ಮಾಡ್ತಾರಾ, ಮಾಡಲಿ ನೋಡೋಣ ಎಂದು ಸವಾಲ್‌ ಎಸೆದಿದ್ದಾರೆ. ಬಿಜೆಪಿಯವರು ಭಾರತ್‌ ಜೋಡೋ ಯಾತ್ರೆ ಥರಾ ಮಾಡಿದ್ರೆ, ಬಿಜೆಪಿಯವರಿಗೆ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಟಾಂಗ್‌ ನೀಡಿದ್ದಾರೆ.

Share.
Leave A Reply