ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಫೈಟ್ ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇಲ್ಲಿಯವರೆಗೂ ಸಿಎಂ ಹಾಗೂ ಡಿಸಿಎಂ ಆಪ್ತ ಬಣಗಳು ಹಲವಾರು ಹೇಳಿಕೆ ನೀಡಿದ್ದವು. ಎಲ್ಲ ಸಂದರ್ಭದಲ್ಲೂ ಸಿದ್ದರಾಮಯ್ಯ ಮಾತ್ರ ನಾನೇ ಐದು ವರ್ಷ ಸಿಎಂ ಅಂತಾ ಹೇಳಿದ್ದರು. ಡಿಸಿಎಂ ಮಾತ್ರ ಶತಪ್ರಯತ್ನ ಮಾಡಿದ್ದರು. ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖಾರ್ಗೆ ಅದು ಲೋಕಲ್ ಫೈಟ್, ನಿಮ್ಮಲ್ಲೇ ಬಗೆಹರಿಸಿಕೊಳ್ಳಿ ಅಂತಾ ಹೇಳಿದ್ದರು. ಆದರೂ ಸಿಎಂ ಸಿದ್ದರಾಮಯ್ಯ ಮಾತ್ರ ಹೈಕಮಾಂಡ್ ಎಲ್ಲವನ್ನೂ ಬಗೆಹರಿಸುತ್ತೆ ಆಂತಾ ಹೇಳಿದ್ದರು. ಆನಂತರ ದೆಹಲಿಗೆ ಹೋದ ಡಿಕೆಶಿ ಮೌನವಾಗಿದ್ದಾರೆ.
ಈಗ ಕೆ.ಎನ್. ರಾಜಣ್ಣ(KN Rajanna) ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಡಿಚ್ಚಿ ಕೊಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ (Congress) ತಲೆದೋರಿರುವ ಅಧಿಕಾರ ಹಂಚಿಕೆ ವಿವಾದದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದಾರೆ.
ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ಸಿಎಂ ಬದಲಾವಣೆ ಗೊಂದಲ ನಾವು ಸೃಷ್ಟಿಸಿಲ್ಲ. ನೀವೇ ಸೃಷ್ಟಿ ಮಾಡಿರೋದು. ಹೀಗಾಗಿ ನೀವೇ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಹೇಳಿದೆ. ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡೋದಿಲ್ಲ ಅನ್ನೋದು ನನ್ನ ಭಾವನೆ. ಇದರಲಿ ಹೈಕಮಾಂಡ್‌ಗೆ ಬೊಟ್ಟು ಮಾಡಿ ತೋರಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ನವರಿ ಅಥವಾ ಫೆಬ್ರವರಿಯಲ್ಲಿ ಸಂಪುಟ ಪುನಾರಚನೆ ಆಗಬಹುದು. ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾದ ಮೇಲೆ ಸಂಪುಟ ಪುನಾರಚನೆ ಆಗಬಹುದು. ಸಿದ್ದರಾಮಯ್ಯರಿಗೆ ತೊಂದರೆ ಆಗುತ್ತೋ ಬಿಡತ್ತೋ ಅನ್ನೋದು ಹೈಕಮಾಂಡ್‌ಗೆ ಮಾತ್ರ ಗೊತ್ತು. ನಾನು ರಾಹುಲ್ ಗಾಂಧಿ ಅವರಿಗೆ ಬರೆದ ಲೆಟರ್ ಈಗ ಲೀಕ್ ಆಗಿದೆ. ವೋಟ್ ಚೋರಿ ಕುರಿತಂತೆ ನಾನು ಕೊಟ್ಟ ಹೇಳಿಕೆ ಲೆಟರ್ ಓದಿದರೆ ಗೊತ್ತಾಗುತ್ತದೆ. ಹೈಕಮಾಂಡ್‌ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.
