ಚಿಕ್ಕಬಳ್ಳಾಪುರ: ಕಿಲಾಡಿ ಲವರ್ಸ್ ಗಳಿಬ್ಬರು ತಮ್ಮ ಮೋಜು, ಮಸ್ತಿಗಾಗಿ ಪರಿಚಯಸ್ಥರಿಗೆ ಪಂಗನಾಮ ಹಾಕಿರುವ ಘಟನೆ ನಡೆದಿದೆ.

ಈ ಘಟನೆ ತಾಲೂಕಿನ (Chikkaballapur) ಅಂಕಣಗುಂದಿ ಗ್ರಾಮದಲ್ಲಿ ನಡೆದಿದೆ. ಪರಿಚಯಸ್ಥರಿಗೆ ಕೆಲಸ ಕೊಡಿಸುವಾದಿಗ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಂಕಣಗುಂದಿಯ ಅನುಷಾ ಮತ್ತು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಿವಾಸಿಯಾಗಿರುವ ಬಾಯ್ ಫ್ರೆಂಡ್ ಅರುಣ್ ಸೇರಿ ಪರಿಚಯಸ್ಥರಿಗೆ ಮೋಸ ಮಾಡಿದ್ದಾರೆ.

ಬಾಯ್ ಫ್ರೆಂಡ್ ಅರುಣ್ ಬೆಂಗಳೂರಿನ ಸಾಯಿ ಸೇಲ್ಪ್ ಡ್ರೈವ್ ಖಾಸಗಿ ಸಂಸ್ಥೆಯಲ್ಲಿ ಸಿಇಒ ಆಗಿದ್ದು, ಕೈ ತುಂಬಾ ಹಣ ಸಂಪಾದಿಸುವ ಕೆಲಸ ಕೊಡಿಸುತ್ತಾರೆ. ಅದಕ್ಕೆ ಹಣ ಕಟ್ಟಬೇಕು ಎಂದು ನಂಬಿಸಿ ಪರಿಚಯಸ್ಥರಿಂದ ಹಣ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ನಿವಾಸಿ ಎಲ್ಎಲ್ಬಿ ವಿದ್ಯಾರ್ಥಿನಿ ಪ್ರತಿಭಾ ಎನ್ನುವವರಿಗೆ ಒಂದು ಲಕ್ಷ 85 ಸಾವಿರ ರೂ., ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿ ನಿವಾಸಿ ಎಂಸಿಎ ಪದವೀಧರೆ ಹರ್ಷಿತಾ ಎನ್ನುವವರಿಗೆ 2 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share.
Leave A Reply