ರಾಜ್ಯದಿಂದ ಆಂಧ್ರ ಪ್ರದೇಶಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಆನೆಗಳನ್ನು ಹಸ್ತಾಂತರಿಸಲಾಯಿತು. ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ ಹಸ್ತಾಂತರ ಕಾರ್ಯಕ್ರಮದಲ್ಲಿ ಕುಮ್ಕಿ ಆನೆಗಳನ್ನ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ಗೆ ಹಸ್ತಾಂತರಿಸಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ CM Siddaramaiah ಅವರು, ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ ಎಂದರು. ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಅಂತಾ ಹೇಳಿದ್ರು.

ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದರು. ಈ ಹಸ್ತಾಂತರದ ಬಗ್ಗೆ ಮೊದಲೇ ಒಪ್ಪಂದ ಆಗಿತ್ತು.ಈಗ ನಾಲ್ಕು ಆನೆಗಳನ್ನ ನೀಡ್ತಿದ್ದೇವೆ. ಎರಡು ಆನೆಗಳನ್ನ ಕಳಿಸಿಕೊಡ್ತೇವೆ ಅಂತಾ ಹೇಳಿದ್ರು. ಒಂದು ತಿಂಗಳು ಆಂಧ್ರದವರಿಗೆ ತರಬೇತಿ ಕೊಟ್ಟಿದ್ದೇವೆ. ಇತ್ತೀಚೆಗೆ ಮಾನವ ಆನೆ ಸಂಘರ್ಷ ಹೆಚ್ಚಾಗಿದೆ. ಇದನ್ನ ಸರಿಯಾಗಿ ನಿಭಾಯಿಸಬೇಕಾಗುತ್ತದೆ. ಮಾನವ ಆನೆ ಸಂಘರ್ಷ ಕಡಿಮೆ ಮಾಡಬೇಕು. ಎಲ್ಲರೂ ಈ ಪ್ರಯತ್ನ ಮಾಡಬೇಕು.

ಇನ್ನು ಮಾವುತರು ಒಂದು ರೀತಿ ಸೈನಿಕರಿದ್ದಂತೆ. ಇಂದು ತರಬೇತಿ ಪಡೆದ ಆನೆಗಳನ್ನ ನೀಡ್ತಿದ್ದೇವೆ.
ಇನ್ನೂ ಬೇರೆ ರಾಜ್ಯಗಳಲ್ಲೂ‌ ಆನೆಗಳು ಇವೆ. ಆದ್ರೆ ಕೋಪರೇಶನ್ ಬೇಕಾಗಿದೆ. ಇದಕ್ಕೆ ಬೇರೆ ರಾಜ್ಯಗಳ ಕೋರ್ಡಿನೇಷನ್ ಮುಖ್ಯವಾಗಿದ್ದು, ಆಗ ಈ ಸಂಘರ್ಷ ತಪ್ಪಿಸಬಹುದು. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಮಗೆ ರಿಕ್ವೆಸ್ಟ್ ಮಾಡಿದ್ರು. ಅದಕ್ಕೆ ನಾವು ಕೊಡ್ತಿದ್ದೇವೆ ಎಂದರು. ಇನ್ನೂ ‌ಹೆಚ್ಚು ಆನೆ ಕೊಡಲು‌ ಸಮಸ್ಯೆ ಇಲ್ಲ. ಅರಣ್ಯ ವೃದ್ಧಿ ಮಾಡುವುದು ಮೊದಲ ಆಧ್ಯತೆ. ಬೇರೆ ರಾಜ್ಯಗಳು ಇದ್ರಲ್ಲಿ ಯಶಸ್ವಿಯಾಗಲಿ ಎಂದ್ರು.

Also Read: Banu Mushtaq : ಕನ್ನಡದ ಕೃತಿಗೆ ಮೊದಲ ಪ್ರತಿಷ್ಟಿತ ಬೂಕರ್‌ ಪ್ರಶಸ್ತಿ : ಯಾವುದಾ ಕೃತಿ?

ಆನೆಗಳನ್ನ‌ ಕೊಡಿ ಅಂತ ನಾನು‌ ಹೇಳಿದ್ದೆ. ಅದಕ್ಕೆ ಇವತ್ತು ಹಸ್ತಾಂತರ ನಡೆದಿದೆ. ದೊಡ್ಡ ಕಾರ್ಯಕ್ರಮ ಮಾಡಬೇಕಿತ್ತು. ಆದ್ರೆ ಮೇನಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆ ಬಂದಿದೆ. ಹೀಗಾಗಿ ಹಾನಿ ಪ್ರದೇಶಕ್ಕೆ ಹೋಗಬೇಕಿದೆ. ಬೆಂಗಳೂರು ಜನತೆ ಸಹಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.

Share.
Leave A Reply