ACP ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಯನ್ನ ಘೋಷಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಸದ್ಯ ಅವರನ್ನ ಬೆಳಗಾವಿ ಡಿಸಿಪಿಯಾಗಿ ನೇಮಿಸಿ ಸರ್ಕಾರ ವರ್ಗಾವಣೆ ಮಾಡಿದೆ. ಸಾರ್ವಜನಿಕ ವೇದಿಕೆಯಲ್ಲೇ ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಅವರಿಗೆ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು. ಇದರಿಂದ ಭರಮನಿ ಅವರು ಮನನೊಂದು ಸ್ವಯಂ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸರ್ಕಾರ ಅವರ ಮನವೊಲಿಸಿದೆ. ಇದೀಗ ಧಾರವಾಡ ಹೆಚ್ಚುವರಿ ಎಸ್‌ಪಿ ಹುದ್ದೆಯಿಂದ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇನ್ನೂ ಬೆಳಗಾವಿಗೆ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಭರಮನಿ, ಸರ್ಕಾರ ಡಿಸಿಪಿ ಮಾಡಿ ವರ್ಗಾವಣೆ ಆದೇಶ ಬಂದಿದೆ. ಬೆಳಗಾವಿ ಡಿಸಿಪಿ ಮಾಡಿ ಸರ್ಕಾರ ಆದೇಶ ಮಾಡಿದೆ. ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ನನಗೆ ಅವಕಾಶ ನೀಡಿದೆ, ಅದರ ಕಡೆ ಗಮನ ಕೊಡುತ್ತೇನೆ. ಹಿರಿಯ ಅಧಿಕಾರಿಗಳ, ಎಲ್ಲರ ಸಲಹೆ ಸೂಚನೆ ಮೇರೆಗೆ ನಾನು ಕೆಲಸ ಮಾಡುತ್ತೇನೆ. ಬೆಳಗಾವಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಅದು ನನಗೆ ಅನಕೂಲ ಆಗಲಿದೆ ಎಂದಿದ್ದಾರೆ.
