ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಈಗಾಗಲೇ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. Talakaveri ಭಾಗಮಂಡಲದಲ್ಲೂ ಮಳೆಯ ತೀವ್ರತೆ ಹೆಚ್ಚಾಗಿದೆ. ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಗಾಳಿ ಮಳೆ ಜೋರಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಸಾಧಾರಣವಾಗಿ ಜುಲೈ ಆಗಸ್ಟ್ ತಿಂಗಳಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗುವುದು ವಾಡಿಕೆ. ಆದರೆ ಈ ಬಾರಿ ಮೇ ಮೊದಲ ವಾರದಲ್ಲಿ ತ್ರಿಮಣಿ ಸಂಗಮ ಭರ್ತಿಯಾಗಿದೆ. ಇದಕ್ಕೆ ಸ್ಥಳೀಯರು ಅತಿರುದ್ರ ಜಪಾಯಜ್ಞ ಎಫೆಕ್ಟ್ ಅಂತಾ ಹೇಳಲಾಗ್ತಿದೆ. ತ್ರಿವೇಣಿ ಸಂಗಮದಲ್ಲಿರುವ ಪಿಂಡಪ್ರದಾನ ಸ್ಥಳ, ಎರಡು ಕೋಟಿ ವೆಚ್ಚದ ಉದ್ಯಾನವನ ಎಲ್ಲವೂ ಮುಳುಗಡೆಯಾಗಿದೆ.

ಇನ್ನೆರಡು ಅಡಿ ನೀರು ಬಂದರೆ ಕೆಳಗಿನ ರಸ್ತೆ ಮುಳುಗಡೆಯಾಗಿ, ಭಾಗಮಂಡಲ ದೇವಾಲಯದ ಮುಂಭಾಗದ ಮೆಟ್ಟಿಲುವರೆಗೆ ನೀರು ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸದ್ಯ ಮೆಲ್ಸೇತುವೆ ಇರೋದ್ರಿಂದ ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ.

Also Read: Kodagu Rain Alert : ಕೊಡಗಿನಲ್ಲಿ ಭಾರಿ ಮಳೆ, ಕಾಲೇಜುಗಳಿಗೆ ರಜೆ : ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆ!

ಇಲ್ಲಿನ ಕೆಲವು ಆಸ್ತಿಕರು ಹೇಳುವಂತೆ, ಕಳೆದ ಮೇ 11 ರಿಂದ 20ರ ತನಕ ತಲಕಾವೇರಿಯಲ್ಲಿ ಇದೇ ಮೊದಲ ಬಾರಿ ಋತಿವಿಕರು ಕೋಟಿ ಜಪ ಯಜ್ಞ ಮಾಡಿದ್ರು. ಇದರ ಪರಿಣಾಮ ಈ ಮೇ ತಿಂಗಳ ಎರಡನೇ ವಾರದಲ್ಲೇ ಮಳೆ ಕಾಣಿಸಿಕೊಂಡಿದೆ ಅಂತಾ ಅಲ್ಲಿನ ಜನರು ನಂಬಿಕೆಯಾಗಿದೆ.

Share.
Leave A Reply