ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಡಾ. ನಟ ವಿಷ್ಣುವರ್ಧನ್‌ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್‌ ಅವರಿಗೆ ಕೊನೆಗೂ ರಾಜ್ಯ ಸರ್ಕಾರ ಕರ್ನಾಟಕ ರತ್ನ ಕೊಡುವ ಮನಸ್ಸು ಮಾಡಿದೆ.

ವಿಷ್ಣುವರ್ಧನ್‌ ಅವರಿಗೆ ಕರ್ನಾಟಕ ರತ್ನ ಕೊಡಬೇಕು ಎಂಬ ಆಗ್ರಹ ಹಲವು ವರ್ಷಗಳಿಂದಲೂ ಇತ್ತು. ಅವರ ಅಭಿಮಾನಿಗಳು, ಕನ್ನಡ ಸಿನಿಮಾ ವೀಕ್ಷಕರು, ಕನ್ನಡಿಗರು ವಿಷ್ಣುಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಅಂತ ಆಗ್ರಹಿಸಿದ್ದರು. ಈ ಆಗ್ರಹಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಡಾ. ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

Read Also : ವಿಷ್ಣುವರ್ಧನ್‌ ಜೊತೆಗೆ ಸರೋಜಾದೇವಿಗೂ ಕರ್ನಾಟಕ ರತ್ನ ಘೋಷಿಸಿದ ರಾಜ್ಯ ಸರ್ಕಾರ!

Share.
Leave A Reply