Author: Chandappa

ಬೆಂಗಳೂರಿನ ನಾಗರಬಾವಿಯಲ್ಲಿರುವ ಕೆಎಲ್‌ಇ ಸೊಸೈಟಿ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯ ಡಿಗ್ರೀ ಕಾಲೇಜಿನಲ್ಲಿ ಸ್ಪೆಷಲ್‌ ಕಾರ್ಯಕ್ರಮ ನಡೆಯಿತು. ಡಿಪಾರ್ಟ್‌ಮೆಂಟ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಸಹಯೋಗದಲ್ಲಿ ಇದೇ ತಿಂಗಳ ಸೆಪ್ಟೆಂಬರ್‌ 17 ಹಾಗೂ 18ರಂದು ಯುಫೋರಿಯಾ 7.O ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳೇ ಮುಂದಾಳತ್ವ ವಹಿಸಿದ್ದು ಎಲ್ಲರ ಗಮನ ಸೆಳೆಯಿತು. ಪ್ರತಿಬಾರಿಯಂತೆ ಈ ಬಾರಿಯೂ EUPHORIA ಕಾರ್ಯಕ್ರಮ SEVEN SPIRITS, INFINITE VIBES ಎಂಬ ಧ್ಯೇಯ ವಾಕ್ಯದಡಿ ನಡೆಯಿತು. ವ್ಯವಹಾರ ಆಡಳಿತ ವಿಭಾಗದ THVAM ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಸಂಸ್ಥೆಯ ಸಪ್ತ ರಿಷಿಗಳಾದ ಹೆಮ್ಮೆಯ 7 ಸಂಸ್ಥಾಪಕರಿಗೆ ಸಮರ್ಪಿಸಲಾಯಿತು. 1916ಯಲ್ಲಿ ಕೆಎಲ್‌ಇ ಸ್ಥಾಪಿಸಿದ ಸಪ್ತ ರಿಷಿಗಳಾದ ಶ್ರೀ ಪ್ರೊ. ಎಸ್.ಎಸ್. ಬಸವ್ನಾಲ್, ಶ್ರೀ ಪ್ರೊ. ಎಂ.ಆರ್.‌ ಸಖಾರೆ, ಶ್ರೀ. ಬಿ.ಬಿ. ಮದಾಪುರ, ಶ್ರೀ ಡಾ.ಎಚ್.ಎಫ್. ಕಟ್ಟಿಮನಿ, ಶ್ರೀ ಪ್ರೊ. ಬಿಎಸ್ ಹಂಚಿನಾಲ್, ಶ್ರೀ ಪ್ರೊ. ಪಿ.ಆರ್. ಚಿಕ್ಕೋಡಿ ಹಾಗೂ…

Read More

ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿ ಸದ್ದು ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಈಗ ಕಾಂಗ್ರೆಸ್‌ನಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತೀವ್ರ ಕಿಡಿಕಾರಿದ್ದಾರೆ. ಅವರು ಉಪ ಮುಖ್ಯಮಂತ್ರಿಗಳಾಗಿ ಆರ್‌ಎಸ್‌ಎಸ್‌ ಗೀತೆಯನ್ನು ಹಾಡಿದ್ದರೆ ಸಮಸ್ಯೆ ಇಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆಯಾಚಿಸುವಂತೆ ಅಂತಾ ಬಿ.ಕೆ.ಹರಿಪ್ರಸಾದ್ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಆರ್​ಎಸ್​​ಎಸ್ ಅನ್ನು ಈ ದೇಶದಲ್ಲಿ 3 ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಇಡೀ 7 ಕೋಟಿ ಕರ್ನಾಟಕ ಜನತೆಯ ಸರ್ಕಾರ. ಅದರಲ್ಲಿ ಆರ್​ಎಸ್​ಎಸ್​ನವರೂ ಇದ್ದಾರೆ. ಜಮಾತ್ ಇಸ್ಲಾಮಿ, ತಾಲಿಬಾನಿಗಳೂ ಇದ್ದಾರೆ ಅಂತಾ ಹೇಳುವ ಮೂಲಕ ಡಿಸಿಎಂ ಡಿಕೆಶಿಗೆ ತೀಕ್ಷ್ಣವಾಗಿಯೇ ತಿವಿದಿದ್ದಾರೆ. ಮತ್ತೊಂದ್ಕಡೆ, ಡಿಕೆಶಿಯವರ ಹೇಳಿಕೆ ಈಗ ವಿರೋಧ ಪಕ್ಷದ ನಾಯಕರಿಗೂ ಅಸ್ತ್ರ ಸಿಕ್ಕಂತಾಗಿದೆ. ಇದೇ…

Read More

ನಾಡಹಬ್ಬ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿರೋ ಹೊತ್ತಲ್ಲೇ ದಸರಾ ಚಾಲನೆ ಕುರಿತು ವಿರೋಧ ಪಕ್ಷದ ನಾಯಕರು ಈ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರಿನ ದಸರಾ ಹಬ್ಬವನ್ನು ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವಲ್ಲಿ ಸಿದ್ದರಾಮಯ್ಯ ನವರು ಅಯ್ಕೆ ಮಾಡಿದ್ದು, ಕರ್ನಾಟಕ ಸರ್ಕಾರದ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಮುಸ್ಲಿಮರನ್ನು ಏಕೆ ಆಹ್ವಾನಿಸಲಾಗುತ್ತದೆ ಎಂದು ವಿರೋದ ಪಕ್ಷದ ನಾಯಕ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕಿಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ಲೇಖಕಿ ನಿರಾಕರಿಸಿದ್ದಾರೆ, ಆದರೆ ಅವರನ್ನು ಆಹ್ವಾನಿಸಲಾಗಿದೆ ಮತ್ತು ಅವರು ಹೋಗುತ್ತಾರೆ ಎಂದು ಹೇಳಿದ್ದಾರೆ. ಈ ವರ್ಷ ಮೈಸೂರಿನಲ್ಲಿ ದಸರಾ ಹಬ್ಬವನ್ನು ಶ್ರೀಮತಿ ಬಾನು ಮುಷ್ತಾಕ್ ರವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ. ಕರ್ನಾಟಕದ ಹಾಸನದ ಬರಹಗಾರ್ತಿ ಬಾನು ಮುಷ್ತಾಕ್ ಈ ವರ್ಷ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 22 ರಂದು ಆರಂಭವಾಗಲಿದ್ದು, ವಿಜಯ ದಶಮಿಯನ್ನು 11 ನೇ…

Read More