ಐಪಿಎಲ್ 2025ರ 60ನೇ ಪಂದ್ಯ ರಣರೋಚಕ ಫೈಟ್‌ಗೆ ಸಾಕ್ಷಿಯಾಗಿದೆ.. ಗುಜರಾತ್ ಹಾಗೂ ಡೆಲ್ಲಿ ಎರಡೂ ತಂಡದ ಆಟಗಾರರ ಅಬ್ಬರದ ಶತಕದಾಟದಿಂದ ಅಭಿಮಾನಿಗಳಿಗೆ ಫುಲ್ ಎಂಟರ್‌ಟೈನ್‌ಮೆಂಟ್ ಸಿಕ್ಕಿದೆ.. ಕನ್ನಡಿಗ ಕೆಎಲ್ Rahul ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಬ್ಬರದ ಶತಕ ಸಿಡಿಸಿ ಮಿಂಚಿದ್ರೂ ಸಹಾ ಸಾಯಿ ಸುದರ್ಶನ್-ಗಿಲ್ ಜೋಡಿಯ ಓಪನಿಂಗ್ ಮೋಡಿಗೆ ಗುಜರಾತ್ ಟೈಟನ್ಸ್ ಗೆದ್ದು ಬೀಗಿದೆ.. ತನ್ನ ತಂಡ ಸೋತ್ರೂ ಸಹಾ ರಾಹುಲ್ ಸಿಡಿಸಿದ ಸೆಂಚುರಿಗೆ ಹಲವು ರೆಕಾರ್ಡ್‌ಗಳು ನೆಲಕಚ್ಚಿವೆ.. ಜೊತೆಗೆ ಸ್ಪೆಷಲ್ ರೆಕಾರ್ಡ್ ಒಂದನ್ನ ರಾಹುಲ್ ಮಾಡಿದ್ದಾರೆ..
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 65 ಎಸೆತಗಳಲ್ಲಿ ಅಜೇಯ 112 ರನ್‌ಗಳನ್ನು ಸಿಡಿಸಿ ರೆಕಾರ್ಡ್ ಮಾಡಿದ್ದಾರೆ.. ಟೂರ್ನಿಯುದ್ಧಕ್ಕೂ ಅತ್ಯದ್ಭುತ ಪ್ರದರ್ಶನ ನೀಡ್ತಿರುವ ಕನ್ನಡಿಗ ತನ್ನ 14 ಕೋಟಿ ಮೌಲ್ಯದ ಬಗ್ಗೆ ಪ್ರಶ್ನೆ ಎತ್ತಿದವರನ್ನು ಸೈಲೆಂಟ್ ಆಗಿಸಿದ್ದಾರೆ.. ಜೊತೆಗೆ ತಮ್ಮ ಸ್ಲೋ ಬ್ಯಾಟಿಂಗ್ ಬಗ್ಗೆಯೂ ತಕರಾರು ಎತ್ತುತ್ತಿದ್ದವರಿಗೆ ತಮ್ಮ ಸೆಂಚುರಿಯಿಂದಲೇ ಉತ್ತರಿಸಿದ್ದಾರೆ.. ಈ ಬಾರಿಯ ಡೆಲ್ಲಿ ಸಕ್ಸಸ್‌ನಲ್ಲಿ ತನ್ನದೇ ಮೇಲುಗೈ ಅಂತ ಪ್ರೂವ್ ಮಾಡಿದ್ದಾರೆ.. ಇದರೊಟ್ಟಿಗೆ T20 ಫಾರ್ಮೆಟ್‌ನಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಮೊದಲ ಭಾರತೀಯ ಎಂಬ ಹೊಸ ದಾಖಲೆ ಬರೆದಿದ್ದಾರೆ..
T20, ಏಕದಿನ, ಟೆಸ್ಟ್ ಮಾದರಿ ಎಲ್ಲಾದ್ರಲ್ಲೂ ತಮ್ಮ ಬ್ಯಾಟಿಂಗ್‌ನಿಂದ ರೂಲ್ ಮಾಡಿದ್ದಂದ್ರೆ ಅದು ಕಿಂಗ್ ಕೊಹ್ಲಿ.. ಕೇವಲ 243 ಇನ್ನಿಂಗ್ಸ್‌ಗಳಲ್ಲಿ t20 ಫಾರ್ಮೆಟ್‌ನಲ್ಲಿ 8000 ರನ್ ಪೂರೈಸಿ ಕೊಹ್ಲಿ ದಾಖಲೆ ಬರೆದಿದ್ರು.. ಆದ್ರೆ ಈಗ ರಾಹುಲ್ ಆ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.. ಕೇವಲ 224 ಇನ್ನಿಂಗ್ಸ್‌ಗಳಲ್ಲೇ 8000 ರನ್‌ಗಳನ್ನ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.. ಜೊತೆಗೆ ವಿಶ್ವದಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.. ಈ ಮೊದಲು 8000 ರನ್ ಗಳಿಸಲು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 213 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ರೆ, ಪಾಕಿಸ್ತಾನದ ಬಾಬರ್ ಆಜಮ್ 218 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ..
ಕೆಎಲ್ ರಾಹುಲ್ ಯಾರು ಮಾಡಿರದ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.. ಐಪಿಎಲ್ ಮೂರು ತಂಡಗಳ ಪರ ಭರ್ಜರಿ ಶತಕ ಸಿಡಿಸಿ ಹೊಸ ಸಾಧನೆ ಮಾಡಿದ್ದಾರೆ.. 2019ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್ ಮುಂಬೈ ಇಂಡಿಯನ್ಸ್ ವಿರುದ್ಧ 64 ಎಸೆತಗಳಲ್ಲಿ 100 ರನ್ ಬಾರಿಸಿದ್ರು. ಬಳಿಕ 2020 ರಲ್ಲಿ ಆರ್ಸಿಬಿ ವಿರುದ್ಧ 69 ಎಸೆತಗಳಲ್ಲಿ 132 ರನ್ ಸಿಡಿಸಿದ್ರು. 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದು ಮುಂಬೈ ಇಂಡಿಯನ್ಸ್ ವಿರುದ್ಧವೇ 2 ಶತಕಗಳನ್ನು ಸಿಡಿಸಿದ್ರು. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 60 ಎಸೆತಗಳಲ್ಲಿ 103 ರನ್ ಬಾರಿಸಿದ್ರೆ ದ್ವಿತೀಯ ಪಂದ್ಯದಲ್ಲಿ 62 ಎಸೆತಗಳಲ್ಲಿ 103 ರನ್ ಹೊಡೆದಿದ್ರು..
Also Read: Karnataka Rain: ಸಿಲಿಕಾನ್ ಸಿಟಿಯಲ್ಲಿ ಮಳೆಯೋ.. ಮಳೆ ; ಹವಮಾನ ಇಲಾಖೆಯಿಂದ ಹೈ ಅಲರ್ಟ್..!
ಕೆಎಲ್ ರಾಹುಲ್ ಈಗಾಗಲೇ ಟೀಂ ಇಂಡಿಯಾದ ಏಕದಿನ ಹಾಗೂ ಟೆಸ್ಟ್ ಟೀಂನಲ್ಲಿ ತಮ್ಮ ಸ್ಥಾನ ಖಾಯಂ ಮಾಡಿಕೊಂಡಿದ್ದಾರೆ.. ಆದ್ರೆ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನದಿಂದ ಭಾರತದ ಟಿ20 ಟೀಂಗೂ ಮತ್ತೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.. ಒಂದೊಮ್ಮೆ ರಾಹುಲ್ ಟಿ20ಗೂ ಮರಳಿದ್ರೆ ಮೂರು ಫಾರ್ಮೆಟ್‌ಗಳನ್ನು ಕಿಂಗ್ ಕೊಹ್ಲಿಯಂತೆ ರೂಲ್ ಮಾಡ್ತಾರಾ ಅನ್ನೋದು ಕಾದು ನೋಡಬೇಕಿದೆ..
