ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ (JCb) ಘರ್ಜನೆ ಮಾಡಿದ್ದು, ಸುಮಾರು 200 ಮನೆಗಳು ನೆಲಸಮವಾಗಿವೆ.
ಪಾಲಿಕೆ ಜಾಗವನ್ನ ಒತ್ತುವರಿ (Encroachment) ಮಾಡಿಕೊಂಡು ನಿರ್ಮಿಸಿದ್ದ 200 ಮನೆಗಳನ್ನ ಜೆಸಿಬಿಗಳ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಇಂದು ಜಿಲ್ಲಾಡಳಿತ ಮುಂದಾಗಿ, ಮನೆಗಳನ್ನು ನೆಲಸಮ ಮಾಡಿದೆ. ಈ ಕಾರ್ಯಾಚರಣೆಯಲ್ಲಿ 6 ಜೆಸಿಬಿ, 300 ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಬಿಗಿ ಭದ್ರತೆಯಲ್ಲಿ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಶ್ರೀನಿವಾಸಪುರದ ಕೋಗಿಲು ಲೇಔಟ್ನಲ್ಲಿರುವ ಈ ಗೋಮಾಳ ಜಾಗವನ್ನ ಜಿಲ್ಲಾಡಳಿತ ನಗರ ಪಾಲಿಕೆಗೆ ನೀಡಿತ್ತು. ಆ ಜಾಗವನ್ನು ಒತ್ತುವರಿ ಮಾಡಿಕೊಂಡು ಹಲವರು ಮನೆ ನಿರ್ಮಾಣ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದವರಿಗೆ ಇಂದು ಶಾಕ್ ಎದುರಾಗಿದೆ.
