ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಬ್ಯಾಕಸ್ ಗಾಲಾ 2025 ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೃಂದಾವನ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗಿಯಾಗುವ ಮೂಲಕ ಮೆರುಗು ಹೆಚ್ಚಿಸಿದರು. ಮಕ್ಕಳ ಮೆದುಳಿನ ಆರೋಗ್ಯ ಮತ್ತು ಮಾನಸಿಕ ಅಂಕಗಣಿತದಲ್ಲಿ ಪ್ರಮುಖ ಸಂಸ್ಥೆಯಾದ ಮಾಸ್ಟರ್‌ಮೈಂಡ್ ಅಬ್ಯಾಕಸ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನೂರಾರು ಮಕ್ಕಳು ಬಂದು ಭಾಗವಹಿಸಿದ್ದರು.





ಕಠಿಣ ಅಬ್ಯಾಕಸ್ ತರಬೇತಿಯ ಮೂಲಕ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಅಸಾಧಾರಣ ಮಾನಸಿಕ ಚುರುಕುತನ, ವೇಗ ಲೆಕ್ಕಾಚಾರ ಮತ್ತು ಏಕಾಗ್ರತೆಯ ಕೌಶಲ್ಯಗಳ ಪ್ರದರ್ಶನಕ್ಕೆ ಕಾರ್ಯಕ್ರಮ ಸಾಕ್ಷಿಯಾಯ್ತು. ಪ್ರತಿ ಹಂತದ ವಿಜೇತರಿಗೆ ಟ್ರೋಫಿಗಳು, ಪದಕಗಳು, ವಿಜೇತ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಕ್ಕಳ ಟ್ಯಾಲೆಂಟ್ ಗುರುತಿಸಿ ಕೂಡ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಈ ವೇದಿಕೆಯು ಮಕ್ಕಳ ಪ್ರತಿಭೆಯನ್ನು ಹೊರತರುವುದಲ್ಲದೆ, ಆರೋಗ್ಯಕರ ಸ್ಪರ್ಧೆ, ಆತ್ಮವಿಶ್ವಾಸ ಮತ್ತು ಶಿಸ್ತಿನ ಪ್ರಜ್ಞೆಯನ್ನು ಬೆಳೆಸುತ್ತದೆ ಅಂತಾ ಸಂಘಟಕರು ಹೇಳಿದರು.
