ಬಿಗ್‌ಬಾಸ್‌ ಅಡ್ಡದಿಂದ ಬಂತು ಬಿರುಗಾಳಿ ನ್ಯೂಸ್‌.. ಮೊಟ್ಟ ಮೊದಲ ಬಾರಿಗೆ ಬಿಗ್‌ಬಾಸ್‌ ಮನೆಗೆ ಅಂತರರಾಷ್ಟ್ರೀಯ ಪ್ಲೇಯರ್ ಎಂಟ್ರಿ.. ಈ ಸಲ ಬಿಗ್‌ಬಾಸ್‌ ಕಪ್ ಮೇಲೆ ಕಣ್ ಇಟ್ಟ ಆ ಸ್ಪರ್ಧಿ ಯಾರು ಅನ್ನೋದ್ರ ಬಗ್ಗೆ ಇಲ್ಲಿದೆ ಕಂಪ್ಲಿಟ್‌ ಡಿಟೇಲ್ಸ್‌.

ಬಿಗ್‌ಬಾಸ್‌.. ಬಿಗ್‌ಬಾಸ್.. ಬಿಗ್‌ಬಾಸ್‌… ಕರುನಾಡಿನ ಅತಿ ದೊಡ್ಡ ರಿಯಾಲಿಟ್‌ ಶೋ ಕಿಚ್ಚನ ಸಾರಥ್ಯದಲ್ಲಿ ಯಶಸ್ವಿಯಾಗಿ ಸತತ 11 ಸೀಸನ್‌ ನಡೆದಿದ್ದು, ಶೀಘ್ರದಲ್ಲೇ ಸೀಸನ್‌ 12 ಕೂಡ ಬರುತ್ತಿದೆ. ಸದ್ಯ ದೊಡ್ಮನೆ ಅಭಿಮಾನಿಗಳಿಗೆ ಈ ಸಲ ಬಿಗ್‌ಬಾಸ್‌ ಮನೆಗೆ ಬರೋದು ಯಾರು? ಅನ್ನೋ ಕುತೂಹಲ ದುಪ್ಪಟ್ಟಾಗಿದೆ.. ಇದರ ನಡುವೆ ಈಗ ಒಂದು ಹೊಸ ಸುದ್ದಿಯೊಂದು ಬಿಗ್‌ಬಾಸ್‌ ಅಡ್ಡಾದಿಂದ ಹೊರಬಿದ್ದಿದ್ದು, ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ಲೇಯರ್ ಒಬ್ಬರು ಬಿಗ್‌ಬಾಸ್‌ ಮನೆಗೆ ಬರ್ತಾರೆ ಎನ್ನಲಾಗಿದೆ. ಕರುನಾಡಿನ ಟಗರು ಪುಟ್ಟಿ, ಆರ್‌ಸಿಬಿ ಹುಲಿ ಅಲಿಯಸ್‌ ಶ್ರೇಯಾಂಕ ಪಾಟೀಲ್‌ ಈ ಸಲ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡ್ತಾರೆ ಅಂತಾ ಹೇಳಲಾಗ್ತಿದೆ.

ಯೆಸ್‌… ನಮ್ಮ ಟಗರು ಪುಟ್ಟಿ ಆರ್‌ಸಿಬಿ ಮತ್ತು ಟೀಮ್‌ ಇಂಡಿಯಾದಲ್ಲಿ ಫುಲ್‌ ಮಿಂಚಿ, ರೀಲ್ಸ್‌ ಮೂಲಕ ಪಡ್ಡೆಹುಡುಗರ ಮನಸ್ಸು ಕದ್ದಿದ್ರು. ಸದ್ಯ ಈಗ ಆಲ್‌ ಓವರ್‌ ಇಂಡಿಯಾ ಟ್ರೆಂಡ್‌ನಲ್ಲಿ ಇರುವ ಆರ್‌ಸಿಬಿ ಹುಲಿ ಇಂಜುರಿಗೆ ತುತ್ತಾಗಿ ಆನ್‌ ಫೀಲ್ಡ್‌ನಿಂದ ಸ್ವಲ್ಪ ಬ್ರೇಕ್‌ ಪಡೆದಿದ್ದಾರೆ. ಇನ್ನೂ ಭಾರತದಲ್ಲಿ ನಡೆಯುವ ಮಹಿಳಾ ವಿಶ್ವಕಪ್​ ಟೂರ್ನಿಯಲ್ಲಿ ಆಡಬೇಕಿತ್ತು. ದುರಾದೃಷ್ಟವೋ ಏನೋ ಇಂಜುರಿ ಕಾರಣದಿಂದ ಅವಕಾಶ ಸಿಕ್ಕಿಲ್ಲ. ಸದ್ಯ ಈಗ ರಿಕವರಿಯಾಗಿರುವ ಟಗರು ಪುಟ್ಟಿ, ಸಿಕ್ಕಿರೋ ಬಿಗ್‌ ಬ್ರೇಕ್‌ನಲ್ಲಿ ಬಿಗ್‌ಬಾಸ್‌ ಆಟಕ್ಕೆ ಎಂಟ್ರಿ ಕೊಟ್ಟು, ಮತ್ತೆ ಕರುನಾಡ ಜನರಿಗೆ ತಮ್ಮ ಹೊಸ ಆಟದ ಮೂಲಕ ಮನರಂಜನೆ ಕೂಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಆದೇನೆ ಆಗಲಿ… ಬಿಗ್‌ಬಾಸ್‌ ಫಿವರ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಿಚ್ಚನ ಹೊಸ ಕಂಡಿಷನ್‌ನಂತೆ ಈ ಬಾರಿ ಬಿಗ್‌ಬಾಸ್‌ ಮನೆಗೆ ಘಟಾನು ಘಟಿಗಳೇ ಬರೋದು ಪಕ್ಕಾ ಆಗಿದೆ.. ಈ ಸಲ ಬಿಗ್‌ಬಾಸ್‌ ಅಭಿಮಾನಿಗಳಿಗೆ ದಿನ ಪೂರ್ತಿ ಎಂಟರ್‌ಟೇನ್ಮೆಂಟ್‌ ಸಿಗೋದು ಗ್ಯಾರಂಟಿ.. ಇದಕ್ಕೆ ನೀವ್‌ ಏನ್‌ ಹೇಳ್ತೀರಾ ನಿಮ್ಮ ಅಭಿಪ್ರಾಯವನ್ನ ತಪ್ಪದೇ ತಿಳಿಸಿ..

Share.
Leave A Reply