ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಕೇಸ್‌ಗೆ ಸದ್ಯ ಜೀವ ಬಂದಂತಾಗಿದೆ. 6 ನೇ ಪಾಯಿಂಟ್‌ನಲ್ಲಿ ಅನಾಮಿಕ ಹೇಳಿದಂತೆ ಅಸ್ಥಿ ಪಂಜರದ ಮೂಳೆಗಳು ಪತ್ತೆಯಾಗಿವೆ. ಮೂಳೆಗಳು ಸಿಕ್ಕ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ. 6ನೇ ಪಾಯಿಂಟ್‌ನಲ್ಲಿ ಎರಡು ಎಲುಬುಗಳು ಪತ್ತೆಯಾಗಿವೆ. ದೂರುದಾರ ಗುರುತಿಸಿದ ಆರನೇ ಪಾಯಿಂಟ್‌ನಲ್ಲಿ ಪತ್ತೆಯಾಗಿವೆ. ಅಸ್ಥಿಪಂಜರದ ಎಲುಬುಗಳನ್ನ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಿದ್ದಾರೆ.
ಸಿಕ್ಕ ಮೂಳೆಗಳನ್ನ ಸಂಗ್ರಹಿಸಿಕೊಂಡ ಎಸ್‌ಐಟಿ ತಂಡ, ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಿದ್ದು, ಹೆಚ್ಚಿನ ಆಳ ತೋಡಲು ನಿರ್ಧರಿಸಿದ್ದಾರೆ. ಮೂಳೆ ಸಿಕ್ಕ ಹಿನ್ನಲೆ ಅಕ್ಕಪಕ್ಕ ಸ್ಥಳಗಳಲ್ಲೂ ಅಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ದಾಖಲಿಸಿಕೊಂಡಿದ್ದಾರೆ. ಇನ್ನೂ ಆರನೇ ಪಾಯಿಂಟ್‌ನಲ್ಲಿ ತನಿಖೆ ಚುರುಕುಗೊಂಡಿದ್ದು, ಬಿರುಸಿನಿಂದ ಕಾರ್ಯಾಚರಣೆ ಮುಂದುವರೆದಿದೆ.
