ಮೈಸೂರು : ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ. ನಾವು ಆ ಕಾರಣಕ್ಕೆ ಬದಲಾಯಿಸಿದ್ದೇವೆ. ರಾಮನಗರ‌ ಜಿಲ್ಲೆ ಮಾಡಿದಾಗ ಯಾವ ಇತಿಹಾಸ ಇತ್ತು? ಎಲ್ಲವನ್ನೂ ಜನಾಭಿಪ್ರಾಯದ‌ ಮೇಲೆ‌ ಮಾಡಲಾಗಿದೆ. ಜನರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿ ಅಂದಿದ್ದಾರೆ ನಿಮ್ಮದೇನು ಅಂತಾ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಪರಮೇಶ್ವರ್ ಮೇಲೆ ಇಡಿ ದಾಳಿ

ಗೃಹ ಸಚಿವ ಡಾ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ED Raid ವಿಚಾರವಾಗಿ. ಇ.ಡಿ ಅವರು ತನಿಖೆ ಮಾಡಲಿ. ಕಪ್ಪು ಹಣ ಇದ್ದರೆ ಪತ್ತೆ ಹಚ್ಚಿ. ನೀವು ರಾಜಕೀಯ ದುರುದ್ದೇಶದಿಂದ ಮಾಡಬಾರದು. ಸಂಸ್ಥೆಗಳು ಇರುವುದು ಕಪ್ಪುಹಣ ತಡೆಗಟ್ಟಲು ಇವೆ. ಪರಮೇಶ್ವರ್ ಕೇಸ್ ನಲ್ಲಿ‌ ರಾಜಕೀಯ ಪ್ರೇರಿತ ದಾಳಿ ಅನಿಸಿದೆ. ಸುಪ್ರೀಂಕೋರ್ಟ್ ಕೂಡ ಗಮನ ಹರಿಸಿ‌ ಮಿತಿ ಮೀರುತ್ತಿದ್ದೀರಿ ಎಂದಿದೆ. ಅವರ ಅಬ್ಸರ್ವೇಷನ್ ಯಾವ ಕಾರಣಕ್ಕೆ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದರು.

Also Read: DKS vs HDK: ‘ಎಚ್‌ಡಿ ಕುಮಾರಸ್ವಾಮಿಗೆ ಮೆಂಟ್ಲು, ಹೆಚ್ಚು ಕಮ್ಮಿ ಆಗಿರಬೇಕು’ – ಡಿಕೆಶಿ

ಯಂಗ್ ಇಂಡಿಯಾ ಕಂಪನಿಗೆ ದೇಣಿಗೆ ವಿಚಾರ
ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ವಿರುದ್ಧ ಚಾರ್ಜ್ ಶೀಟ್ ಗೆ ಪ್ರತಿಕ್ರಿಯೆ ನೀಡುತ್ತಾ, ದೇಣಿಗೆ ಕೊಡುವುದು ತಪ್ಪಾ? ದೇಣಿಗೆ ಕೊಡುವುದು ತಪ್ಪೇನಲ್ಲ ಎಂದರು.

Share.
Leave A Reply