ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Brothers) ಮಧ್ಯೆ ರಾಜಕೀಯ ಸಮರ ಮತ್ತೆ ಮುಂದುವರೆದಿದೆ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಡಿಕೆಶಿ ಎಚ್‌ಡಿಕೆ (DKS vs HDK) ವಿರುದ್ಧ ಸಿಡಿದೆದ್ದಿದ್ದಾರೆ.
ಇಂದು ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರನ್ಯಾ ಚಿನ್ನದ ವಿಚಾರ ಹೇಳಿದ್ದು ಕಾಂಗ್ರೆಸ್‌ನ ಮಹಾ ನಾಯಕ ಎಂಬ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಡಿಕೆ ಶಿವಕುಮಾರ್, ಕುಮಾರಸ್ವಾಮಿಗೆ ಮೆಂಟ್ಲು. ಪಾಪ ಮೆಂಟ್ಲು ಹೆಚ್ಚು ಕಡಿಮೆ ಆಗಿರಬೇಕು. ಅವರಿಗೆ ತಲೆ ಸರಿ ಇಲ್ಲ. ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ ಎಂದು ಕಿಡಿಕಾರಿದರು (DKS vs HDK).
ಇದೇ ವೇಳೆ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಅದು ಬೆಂಗಳೂರು ಜಿಲ್ಲೆ. ರಾಮನಗರ ಚೆಂಜ್ ಮಾಡ್ತಿಲ್ಲ, ರಾಮನಗರ ರಾಮನಗರವಾಗಿಯೇ ಇರುತ್ತೆ. ಇವ್ರ್ಯಾಕೆ ಹಾಸನದಿಂದ ಬಂದ್ರು. ಹಾಸನದಿಂದಲೇ ರಾಜಕಾರಣ ಮಾಡಬೇಕಿತ್ತಲ್ಲ? ಇವ್ರ ಹೆಸ್ರನ್ನ ಮೊದಲು ಚೆಂಜ್ ಮಾಡಿಕೊಳ್ಳಲಿ. ಅವ್ರ ತಂದೆ ಹಹೆಸರು, ಅವರ ಊರ ಹೆಸ್ರನ್ನ ಯಾಕೆ ಇಟ್ಕೊಂಡಿದ್ದಾರೆ? ಎಚ್ ಡಿ ಕುಮಾರಸ್ವಾಮಿ ಎನ್ನುವ ಹೆಸ್ರನ್ನ ಬದಲಾಯಿಸಿಕೊಳ್ಳಲಿ ಎಂದು ಹೆಚ್‌ಡಿಕೆಗೆ ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ.
Also Read: ರನ್ಯಾರಾವ್ ಪ್ರಕರಣ : ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ನಾಯಕ : HDK ವಾಗ್ದಾಳಿ
ನಾವು ಬೆಂಗಳೂರು ರೀ, ನಾವು ನಮ್ಮ ಬೆಂಗಳೂರು ಜಿಲ್ಲೆಯವರು. ನಮಗೆ ನಮ್ಮದೇ ಆದ ಆಸೆ ಎಲ್ಲ ಇರುತ್ತೆ. ಮದ್ರಾಸ್‌ನ ಚೆನ್ನೈ ಯಾಕ್ ಮಾಡಿದ್ರು? ಗುಲಬರ್ಗಾ ಕಲಬುರ್ಗಿ ಯಾಕ್ ಮಾಡಿದ್ರು? ಬೆಂಗಳೂರು ಜಿಲ್ಲೆ ಅಂತಾ ಮಾಡಿದ್ರೆ ಅವ್ರಿಗೇನು ತೊಂದರೆ? ಮುಂದೆ ಏನ್ ಮಾಡ್ತೀವಿ ಎಂದು ನೋಡಲಿ ಎಂದು ಡಿಕೆ ಶಿವಕುಮಾರ್ ಕುಟುಕಿದರು.
ಇನ್ನು, ರಿಯಲ್ ಎಸ್ಟೇಟ್ ಡೆವೆಲಪ್ಮೆಂಟ್ ಗಾಗಿ ಮಾಡಿದ್ದು ಎನ್ನುವ ಆರೋಪ ವಿಚಾರದ ಬಗ್ಗೆಯೂ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೌದುರೀ, ಅದಕ್ಕಾಗಿಯೇ ಮಾಡಿದ್ದು. ನಮ್ಮ ಬೆಂಗಳೂರು, ನಮ್ಮ ಹಳ್ಳಿಯವರು ಅಭಿವೃದ್ಧಿ ಆಗಬೇಕು, ಎಲ್ಲರ ಆಸ್ತಿಗಳ ಬೆಲೆ ಹೆಚ್ಚಾಗಬೇಕು. ರೈತರ ಬದುಕು ಒಳ್ಳೆಯದಾಗಬೇಕು, ಉದ್ಯೋಗ ಸಿಗಬೇಕು. ಹೊರ ದೇಶದಿಂದ ಬಂದು ಬಂಡವಾಳ ಹಾಕಬೇಕು ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಹಗರಣ ವಿಚಾರದ ಹಗರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ ಹಾಗೂ ರೇವಂತ್ ರೆಡ್ಡಿ ಭಾಗಿಯಾಗಿರೋ ಆರೋಪದ ಬಗ್ಗೆ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಮ್ಮ ಪಕ್ಷದ್ದು. ಪಕ್ಷದ ಪತ್ರಿಕೆಗೆ ಫಂಡ್ ಕೊಟ್ಟಿದ್ದೇವೆ. ಕೊಟ್ಟರೆ ಏನು ತಪ್ಪು? ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹಣಕಾಸು ನೆರವು ನೀಡಿದ್ದನ್ನು ಒಪ್ಪಿದರು.
