ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆಗೆ ಕ್ಷಣಗಣನೆ ಶುರುವಾಗಿದೆ. ತಂಡದ Captaincy Race ಯಾರಾಗಲಿದ್ದಾರೆ ಎಂಬ ಪ್ರಶ್ನೆ ಭಾರೀ ಕುತೂಹಲ ಕೆರಳಿಸಿದೆ. ನಾಯಕರಾಗಿದ್ದ ರೋಹಿತ್ ಶರ್ಮಾ ಹಾಗೂ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಯುವ ಪಡೆಯನ್ನೇ ಆಯ್ಕೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಜೂನ್ 20 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ೫ ಪಂದ್ಯಗಳ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತ ದಿಗ್ಗಜ ಆಟಗಾರರನ್ನು ಹೊರಗಿಟ್ಟಿದ್ದು ಸಾಕಷ್ಟು ಚರ್ಚೆಯಾಗಿತ್ತು. ಈ ಮೂಲಕ ಕೋಚ್ ಗೌತಮ್ ಗಂಭೀರ್ ಸಂಪೂರ್ಣ ಯಂಗ್ ಟೆಸ್ಟ್ ಟೀಮ್ ಕಟ್ಟೋಕೆ ಸಿದ್ಧವಾಗಿದ್ದಾರೆ ಅನ್ನೋ ಮೆಸೇಜ್ ಪಾಸ್ ಆಗಿತ್ತು. ಅದರಂತೆ ಆಸ್ಟ್ರೇಲಿಯಾ ಸರಣಿಯಲ್ಲಿ ಉಪ ನಾಯಕರಾಗಿದ್ದ ಜಸ್ಪ್ರೀತ್ ಬೂಮ್ರ, ಪ್ರಿನ್ಸ್ ಶುಭ್‌ಮನ್ ಗಿಲ್, ಸ್ಟಾರ್ ಬ್ಯಾಟರ್‌ಗಳಾದ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಕ್ಯಾಪ್ಟೆನ್ಸಿ ರೇಸ್‌ನಲ್ಲಿರೋ ಮಾಹಿತಿ ಹೊರಬಿದ್ದಿತ್ತು. ಆದ್ರೀಗ, ಶುಭ್‌ಮನ್ ಗಿಲ್‌ಗೆ ಕ್ಯಾಪ್ಟೆನ್ಸಿ ನೀಡಿ ರಿಷಭ್ ಪಂತ್‌ಗೆ ಉಪ ನಾಯಕನ ಸ್ಥಾನ ಕೊಡೋದಕ್ಕೆ ಗಂಭೀರ್ ಮತ್ತು ಆಯ್ಕೆ ಮಂಡಳಿ ನಿರ್ಧರಿಸಿದೆ ಎನ್ನಲಾಗ್ತಿದೆ.
ಅನನುಭವಿಗಳೇ ಹೆಚ್ಚಿರುವ ಈ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೆ ಕೆ.ಎಲ್. ರಾಹುಲ್ ಆರಂಭಿಕರಾಗಿ ಮುಂದುವರಿಯುವುದು ಖಚಿತವಾಗಿದೆ. ಮೂರನೇ ಕ್ರಮಾಂಕದಲ್ಲಿ ಆಡುವ ಶುಭ್‌ಮನ್ ಗಿಲ್ ಈ ಹಿಂದೆ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿದ್ದ ನಾಲ್ಕನೇ ಕ್ರಮಾಂಕಕ್ಕೆ ಶಿಫ್ ಆಗ್ತಾರೆ ಎನ್ನಲಾಗ್ತಿದೆ. ರಿಷಭ್ ಪಂತ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಧೃವ ಜುರೆಲ್ ಜೊತೆಗೆ ಅಭಿಮನ್ಯು ಈಶ್ವರನ್, ಕರುಣ್ ನಾಯರ್, ಸಾಯಿ ಸುದರ್ಶನ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಆಯ್ಕೆ ರೇಸ್‌ನಲ್ಲಿದ್ದಾರೆ.
ಅನುಭವಿ ಶ್ರೇಯಸ್ ಅಯ್ಯರ್ ಆಯ್ಕೆ ಬಗ್ಗೆ ಅನುಮಾನವಿದೆ. ಗಾಯದಿಂದ ಚೇತರಿಸಿಕೊಂಡಿದ್ದರೂ ಟೆಸ್ಟ್ ಮ್ಯಾಚ್ ಫಿಟ್‌ನೆಸ್ ಇಲ್ಲವೆಂದು ಮೊಹಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಕನ್ನಡಿಗ ಪ್ರಸಿಧ್ ಕೃಷ್ಣ ಆಯ್ಕೆ ಕನ್ಫರ್ಮ್ ಆಗಿದೆ. ಯುವ ಲೆಫ್ಟ್ ಆರ್ಮ್ ಸೀಮರ್ ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ಸಿಗಲಿದೆ ಎನ್ನಲಾಗಿದ್ದು, ಶಾರ್ದುಲ್ ಠಾಕೂರ್, ಹರ್ಷಿತ್ ರಾಣಾ, ಆಕಾಶ್‌ದೀಪ್ ಸಿಂಗ್ ರೇಸ್‌ನಲ್ಲಿರುವ ಇತರ ವೇಗಿಗಳಾಗಿದ್ದಾರೆ.
Also Read: ಪರಮೇಶ್ವರ್ ಮೇಲೆ ED Raid ರಾಜಕೀಯ ಪ್ರೇರಿತ ದಾಳಿ : ಸಿಎಂ ಸಿದ್ದರಾಮಯ್ಯ
ಒಟ್ಟಾರೆ 17 ಅಥವಾ 18 ಆಟಗಾರರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದ್ದು ಬಹಳಷ್ಟು ಯುವ ಮುಖಗಳಿಗೆ ಅವಕಾಶ ಸಿಗೋದು ಖಚಿತವಾಗಿದೆ. ಶನಿವಾರ ಆಯ್ಕೆ ಮಂಡಳಿ ಸಭೆ ನಡೆಯಲಿದ್ದು, ಸಂಜೆಯ ವೇಳೆಗೆ ತಂಡದ ಘೋಷಣೆಯಾಗಲಿದೆ. ಪ್ರೆಸ್‌ಮೀಟ್‌ನಲ್ಲಿ ನೂತನ ನಾಯಕರಾಗಿ ಘೋಷಣೆಯಾಗಲಿರೋ ಪ್ರಿನ್ಸ್ ಶುಭ್‌ಮನ್ ಗಿಲ್ ಕೂಡ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುವಂತಾಗಿದೆ.
