ಸರಣಿ ಹತ್ಯೆ ನಡೆದಿದೆ ಅನ್ನೋ ಆರೋಪ ಪ್ರಕರಣ ಸಂಬಂಧ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮೌನ ಮುರಿದಿದ್ದಾರೆ.. ಪಿಟಿಐ ನ್ಯೂಸ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿರುವ ಹೆಗ್ಗಡೆಯವರು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಅಂತಾ ಆಗ್ರಹಿಸಿದ್ದಾರೆ.
ಈ ಕ್ಷೇತ್ರದ ಮೇಲಿನ ಅಸೂಯೆಯಿಂದ ಅಪಪ್ರಚಾರ ಮಾಡಲಾಗುತ್ತಿದೆ.. ಕ್ಷೇತ್ರಕ್ಕೆ ಬರೋ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಕ್ಯೂನಲ್ಲಿ ಯಾವುದೇ ಸಮಸ್ಯೆ ಆಗದಂತೆ ಪ್ರೀತಿ ತೋರಿಸುತ್ತೇವೆ. ಭಕ್ತರಿಗೂ ಧರ್ಮಸ್ಥಳ ನಮ್ಮದು ಅನ್ನೋ ನಂಬಿಕೆ ಬಂದಿದೆ.. ಇದೇ ಕಾರಣಕ್ಕಾಗಿಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಅಂತಾ ಹೇಳಿದ್ದಾರೆ. ಈಗ ಎಸ್‌ಐಟಿ ತನಿಖೆ ಮಾಡ್ತಿರೋದು ನಿರಾಳ ತಂದಿದೆ..
ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಅನ್ನೋ ಯೂಟ್ಯೂಬರ್‌ಗಳ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಹೆಗ್ಗಡೆಯವರು, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ.. ಇಲ್ಲಿಗೆ ಎಲ್ಲ ಪಕ್ಷದ ಶಾಸಕರು ಬಂದು, ತುಂಬಾ ಹಿಂಸೆ ಆಗಿದೆ ಅಂತಾ ನೋವು ತೋಡಿಕೊಳ್ತಿದ್ದಾರೆ.
ಇನ್ನು, ಈಗಾಗ್ಲೇ ಡಿಸಿಎಂ ಡಿಕೆಶಿ ಇದೊಂದು ದೊಡ್ಡ ಷಡ್ಯಂತ್ರ ಅಂತಾ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ನಾನು ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗ್ತೇನೆ ಅಂದಿದ್ದು, ಇದರ ಬಗ್ಗೆಯೂ ಹೆಗ್ಗಡೆಯವರು ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಮಂಜುನಾಥ ಸ್ವಾಮಿ ಭಕ್ತರು. ಅವರು ಹೇಳೋದ್ರಲ್ಲಿ ತಪ್ಪಿಲ್ಲ ಅಂದಿದ್ದಾರೆ. ಸರ್ಕಾರಿ ಶಾಲೆಗಳಿಗೆ ಈ ಕ್ಷೇತ್ರ ಸಹಾಯ ಮಾಡುತ್ತದೆ. ಇದೆಲ್ಲವೂ ಸಿಎಂ, ಡಿಸಿಎಂ ಗೊತ್ತಿದೆ ಅಂತಾ ಹೇಳಿದ್ದಾರೆ..
ಮತ್ತೊಂದೆಡೆ, ಅನಾಮಿಕನ ಬಗ್ಗೆಯೂ ಮಾತಾಡಿರುವ ಹೆಗ್ಗಡೆಯವರು, ಅವನ ಬಗ್ಗೆ ಹೇಳಲು ಏನಿಲ್ಲ. ಈಗ ಎಸ್‌ಐಟಿ ತನಿಖೆ ಮಾಡುತ್ತಿದೆ. ಪೂರ್ತಿ ವರದಿ ಬಂದ ನಂತರ ನೋಡಬೇಕು ಅಂತಾ ಹೇಳಿಕೆ ನೀಡಿದ್ದಾರೆ.
Real Also : ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ : ಪರಮೇಶ್ವರ್
