ರೇಣುಕಾಸ್ವಾಮಿ ಕೇಸ್‌ನಲ್ಲಿ ಜಾಮೀನು ಪಡೆದು ರಿಲೀಸ್ ಆಗಿರುವ ನಟ ದರ್ಶನ್‌ (Darshan Thoogudeepa)ಗೆ ಕೊನೆಗೂ ಕೋರ್ಟ್ ಗುಡ್‌ನ್ಯೂಸ್ ಕೊಟ್ಟಿದೆ. ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್‌ಗೆ ವಿದೇಶಕ್ಕೆ ತೆರಳಲು ಗ್ರೀನ್‌ಸಿಗ್ನಲ್ ಸಿಕ್ಕಿದೆ.

ಡೆವಿಲ್‌ ಸಿನಿಮಾ ಶೂಟಿಂಗ್ ಹಿನ್ನೆಲೆ ದುಬೈ ಹಾಗೂ ಯೂರೋಪ್‌ಗೆ ಹೋಗಲು ಅನುಮತಿ ಕೋರಿ ನಟ ದರ್ಶನ್‌ ಅರ್ಜಿ ಸಲ್ಲಿಸಿ, ಕೋರ್ಟ್‌ ಆದೇಶಕ್ಕೆ ಕಾಯ್ತಾ ಇದ್ರು.. ಸದ್ಯ 64ನೇ CCH ಕೋರ್ಟ್‌ನ ನ್ಯಾ. ಐ.ಪಿ ನಾಯ್ಕ್‌ ಅವರು ದರ್ಶನ್‌ಗೆ ಅನುಮತಿ ನೀಡಿ ಆದೇಶಿಸಿದ್ದಾರೆ.

Also Read: ನಾನು ತಪ್ಪೇ ಮಾಡಿಲ್ಲ, ಕ್ಷಮೆ ಕೇಳಲ್ಲ.. ಕನ್ನಡಿಗರಿಗೆ ಕ್ಷಮೆ ಕೇಳಲು ನಿರಾಕರಿಸಿದ Kamal

ಜೂನ್ 1ರಿಂದ ಜೂನ್‌ 25ರವರೆಗೆ ಅಂದ್ರೆ 25 ದಿನಗಳ ಕಾಲ ವಿದೇಶಕ್ಕೆ ಹೋಗಲು ಅನುಮತಿ ನೀಡಿ ಸೆಷನ್ಸ್ ಕೋರ್ಟ್ ನಿಂದ ಆದೇಶ ಜಾರಿಯಾಗಿದೆ. ಸದ್ಯ ದರ್ಶನ್‌ಗೆ ವಿದೇಶ ಶೂಟಿಂಗ್‌ಗಾಗಿ ದುಬೈ ಹಾಗೂ ಯುರೋಪ್‌ಗೆ ತೆರಳಲು ಕೋರ್ಟ್‌ ಅವಕಾಶ ನೀಡಿದೆ.

Share.
Leave A Reply