ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎನ್ನುವ ಮೂಲಕ ವಿವಾಹ ಹುಟ್ಟು ಹಾಕಿದ ಕಮಲ್ ಹಾಸನ್ (kamal Hassan) ಇಷ್ಟೆಲ್ಲ ರಾದ್ಧಾಂತ ನಡೆದ ಮೇಲೆಯೂ ಕ್ಷಮೆ ಕೇಳುವ ಯೋಚನೆ ಮಾಡುತ್ತಿಲ್ಲ. ಅವರು ಇತ್ತೀಚೆಗೆ ಕ್ಷಮೆ ಕೇಳುವ ಬಗ್ಗೆ (kannada Contraversy) ಪ್ರತಿಕ್ರಿಯಿಸಿ ಉದ್ಧಟತನದಿಂದ ಮಾತನಾಡಿದ್ದಾರೆ.

ಕನ್ನಡ ಭಾಷೆಯ ಕುರಿತಾದ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ತಪ್ಪು ಮಾಡಿಲ್ಲ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ. ಇದು ಪ್ರಜಾ ಪ್ರಭುತ್ವ ರಾಷ್ಟ್ರ, ನನಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದಾರೆ.ನನಗೆ ಕೇರಳ, ಕರ್ನಾಟಕದ ,ಆಂಧ್ರ ಮೇಲಿರೋ ಪ್ರೀತಿ ನಿಜವಾದದ್ದು.ಇದೇ ನನ್ನ ಜೀವನ ಶೈಲಿ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಫಿಲಂ ಚೇಂಬರ್ ಮನವಿಗೂ ಸ್ಪಂದಿಸದ ಕಮಲ್ ಹಾಸನ್ ಮತ್ತೆ ಉದ್ಧಟತನದಿಂದಲೇ ಮಾತನಾಡಿದ್ದಾರೆ. ಪ್ರದರ್ಶನ ನಿರ್ಬಂಧ ಹೇರಲು ಸೂಚಿಸಿದ್ದ ಸರ್ಕಾರದ ಲೆಟರ್ ಗೂ ನಟ ಡೋಂಟ್ ಕೇರ್ ಎಂದಿದ್ದು ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದಾರೆ.ಕಮಲ ಹಾಸನ್ ಹೇಳಿಕೆ ಬೆನ್ನಲ್ಲೇ ಸರ್ಕಾರದ ಜೊತೆ ಮಾತಡಲು ಫಿಲ್ಮ್ ಚೇಂಬರ್ ಸಜ್ಜಾಗಿದೆ. ನಾನು ಕೆಲವು ಅಜೆಂಡಾ ಇಟ್ಕೊಂಡಿರೋ ವ್ಯಕ್ತಿಗಳ ಬೆದರಿಕೆಗೆ ಬಗ್ಗಲ್ಲ ಎಂದು ಹೇಳಿದ್ದಾರೆ.

ಇನ್ನು ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ (Rachita ram) ನಟ Kamal Hassan ತಿರುಗೇಟು ಕೊಟ್ಟಿದ್ದಾರೆ. ಈ ಕುರಿತಾದ ಒಂದು ವಿಡಿಯೋ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿ ಕಿಡಿಕಾರಿದ್ದಾರೆ.. ಇನ್ನು ರಚಿತಾ ರಾಮ್‌ ಮಾತನಾಡಿ, ಎಲ್ಲರಿಗೂ ನಮಸ್ಕಾರ , ನನಗೆ ಈಗ ಹಾಡೊಂದು ನೆನಪಾಯ್ತು, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀನು ಕನ್ನಡವಾಗಿರು ಎಂದು. ನಾನು ಏಕೆ ಈ ಮಾತನ್ನು ಹೇಳ್ತಾ ಇದ್ದೀನಿ ಅಂದರೆ, ಕನ್ನಡ ಕರ್ನಾಟಕ, ಅಂತ ಬಂದರೆ, ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ಎಂದರೆ ಇಮೋಷನ್‌.

ನಮ್ಮ ಕನ್ನಡ ಭಾಷೆ ಬಗ್ಗೆ, ಯಾರಾದರೂ ಟೀಕೆ ಮಾಡುತ್ತಿದ್ದಾರೆ ಅಂದಾಗ, ಸುಮ್ಮನೆ ಕೂರೂಕೆ ಆಗಲ್ಲ ಅಲ್ವಾ? ನಾವು ಕನ್ನಡದವರು ಎಷ್ಟು ವಿಶಾಲ ಹೃದಯವದರು ಅಂದರೆ, ಪ್ರತಿ ಭಾಷೆ ಸಿನಿಮಾವನ್ನ ನೋಡ್ತೀವಿ. ನಾನು ಬೇರೆ ಭಾಷೆಯ ನಟರನ್ನ ಪ್ರೋತ್ಸಾಹಿಸುತ್ತೇವೆ. ಆದರೆ ನಮ್ಮ ಭಾಷೆ ಬಗ್ಗೆ ಯಾರಾದರೂ ಮಾತಾಡುತ್ತಾರೆ ಅಂದಾಗ, ನಾವು ಯಾಕೆ ಧ್ವನಿ ಎತ್ತಬಾರದು.

Also Read: Darshan Thoogudeepa : ವಿದೇಶಕ್ಕೆ ಹಾರೋಕೆ ದರ್ಶನ್‌ಗೆ ಗ್ರೀನ್‌ ಸಿಗ್ನಲ್‌!

ನಾವು ಇಲ್ಲಿ ಯಾವ ಭಾಷೆಯ ಬಗ್ಗೆಯೂ ಕೆಟ್ಟದಾಗಿ ಮಾತಾಡಿಲ್ಲ. ನಾವು ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ ಅಂತ, ಚಿಕ್ಕವರು ತಪ್ಪು ಮಾಡಿದ ತಕ್ಷಣ ಸಾರಿ ಕೇಳೋ ವರೆಗೂ ಬಿಡಲ್ಲ, ದೊಡ್ಡವರು ತಪ್ಪು ಮಾಡಿದ್ರೆ? ಕ್ಷಮೆ ಕೇಳೋದರಲ್ಲಿ ತಪ್ಪೇನಿದೆ? ಇನ್ನು ಕನ್ನಡ ಭಾಷೆಯ ಬಗ್ಗೆ ತಪ್ಪಾಗಿ ಮಾತಾನಾಡುವರನ್ನ ಏನಂತ ಹೇಳೋಣ? ಎಂದು ರಚಿತಾ ರಾಮ್‌ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸದ್ಯ ರಚಿತಾ ರಾಮ್‌ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರು ರಚಿತಾ ರಾಮ್‌ಗೆ ಹೆಮ್ಮೆಯ ಕನ್ನಡತಿ ಎಂದು ಕಾಮೆಂಟ್‌ ಮಾಡ್ತಿದ್ದಾರೆ..

Share.
Leave A Reply