ರಾಜ್ಯ Congress Government 2 ವರ್ಷಗಳ ಸಂಭ್ರಮ – ವಿಜಯನಗರದಲ್ಲಿ ಇಂದು ಸಾಧನಾ ಸಮಾವೇಶ
ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದೆ. ಎರಡು ವರ್ಷ ಪೂರ್ಣಗೊಂಡು 3ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ 2 ವರ್ಷದ ಅವಧಿಯ ಸಾಧನೆ ತಿಳಿಸಲೆಂದು ವಿಜಯನಗರ (Vijayanagara) ಜಿಲ್ಲೆ ಹೊಸಪೇಟೆಯಲ್ಲಿ ಇಂದು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಹೊಸಪೇಟೆಯ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

Congress Government ಇಂದು ನಡೆಯುತ್ತಿರುವ ಸರ್ಕಾರದ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. 200 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಸಮಾವೇಶ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಇಲ್ಲಿನ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದರು. ಇದು ಸರ್ಕಾರದ ಕಾರ್ಯಕ್ರಮ ವಾಗಿರುವುದರಿಂದ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದರು.

ನೂರಾರು ವರ್ಷಗಳಿಂದ ಹಕ್ಕುಪತ್ರಗಳಿಂದ ವಂಚನೆಗೆ ಒಳಗಾದವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಸರ್ಕಾರದ ಆಸ್ತಿಯನ್ನು ನೇರವಾಗಿ ತಹಸೀಲ್ದಾರರು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿ ಫಲಾನುಭವಿಗಳಿಗೆ ನೀಡಲಿದ್ದಾರೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗುತ್ತದೆ. ಜನ ನಮಗೆ ಆದೇಶ ಮಾಡಿ ಅವಕಾಶ ನೀಡಿದ್ದಾರೆ. ನಾವು ಅವರ ಋಣ ತೀರಿಸಬೇಕಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದರು.

Also Read: Darshan, Pavithra Gowda : ಕೋರ್ಟ್‌ನಲ್ಲಿ ದರ್ಶನ್‌ ಪವಿತ್ರಾ ಮುಖಾಮುಖಿ!

ಈ ಸಂದರ್ಭವನ್ನು ಆಚರಿಸಲು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಕರ್ನಾಟಕ ಅಭಿವೃದ್ಧಿ ಮಾದರಿ’ ಎಂಬ ಪುಸ್ತಕದಲ್ಲಿ ಸರ್ಕಾರದ ಎರಡು ವರ್ಷಗಳ ಪ್ರಗತಿ ವರದಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನಾವರಣಗೊಳಿಸಲಿದ್ದಾರೆ.

ಇದರಲ್ಲಿ ಎಲ್ಲಾ ಇಲಾಖೆಗಳು ಸಾಧಿಸಿದ ಪ್ರಗತಿ ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಸರ್ಕಾರಕ್ಕೆ ದೊರೆತ ಪ್ರಶಂಸೆಗಳ ವಿವರಗಳಿವೆ. ಬಜೆಟ್‌ನಲ್ಲಿ ಭಾರಿ ಹಣವನ್ನು ಹಂಚಿಕೆ ಮಾಡುವುದರೊಂದಿಗೆ, ಮುಖ್ಯಮಂತ್ರಿಯಾಗಿದ್ದಾಗ ಅಹಿಂದ ಸಮುದಾಯಗಳನ್ನು ನಿರಾಳಗೊಳಿಸದ ಬಗ್ಗೆಯೂ ವಿವರಗಳನ್ನು ಒಳಗೊಂಡಿದೆ.

Share.
Leave A Reply