ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ Darshan, Pavithra Gowda ಕೋರ್ಟ್‌ನಲ್ಲಿ ದರ್ಶನ್‌ ಪವಿತ್ರಾ ಮುಖಾಮುಖಿ!ಕೋರ್ಟ್‌ನಲ್ಲಿ ಮತ್ತೆ ಮುಖಾಮುಖಿಯಾಗಿದ್ದಾರೆ.. ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್‌ ನ್ಯಾಯಾಧೀಶರ ಮುಂದೆ ದರ್ಶನ್‌ ಪವಿತ್ರಾ ಸೇರಿ 17 ಆರೋಪಿಗಳು ಹಾಜರಾಗಿದ್ದಾರೆ.. ಇನ್ನೊಂದು ಅಚ್ಚರಿ ಅಂದ್ರೆ ದರ್ಶನ್‌ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಬಂದಿದ್ರೆ, ಪವಿತ್ರಾ ಬಿಳಿ ಉಡುಗೆಯಲ್ಲಿ ಎಂಟ್ರಿ ಕೊಟ್ಟಿದ್ದು, ಕೋರ್ಟ್‌ನಲ್ಲಿ ಎದುರು ಬದುರಾಗಿದ್ದಾರೆ ಎನ್ನಲಾಗ್ತಿದೆ..

Also Read: Darshan, Pavithra Gowda: Darshan and Pavithra face off in court!

ಇನ್ನು, ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕಿದೆ.. ಹೀಗಾಗಿ ಇಂದು ಎಲ್ಲ ಆರೋಪಿಗಳೂ ಕೋರ್ಟ್​ಗೆ ಹಾಜರಾಗಿದ್ದಾರೆ… ಇನ್ನು, ಕೋರ್ಟ್‌ನಲ್ಲಿ ಜಾಮೀನು ಪಡೆದ ನಂತರ ದರ್ಶನ್‌ ರಾಜಸ್ಥಾನ ಸೇರಿದಂತೆ ವಿವಿಧೆಡೆ ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.. ಮೊನ್ನೆಯಷ್ಟೇ ದರ್ಶನ್‌ ಹಾಗೂ ವಿಜಯಲಕ್ಷ್ಮೀ ಭರ್ಜರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ರು.. ವಿಜಯಲಕ್ಷ್ಮೀಗಾಗಿ ದರ್ಶನ್‌ ಹಿಂದಿ ಹಾಡು ಹಾಡಿದ್ದು ಭಾರಿ ಸದ್ದು ಮಾಡಿತ್ತು..

Share.
Leave A Reply